Ad Widget .

ಚಿಕನ್ ಪ್ರಿಯರಿಗೆ ಬಿಗ್ ಶಾಕ್| ಕೋಳಿಮಾಂಸ, ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ

ಸಮಗ್ರ ನ್ಯೂಸ್: ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬಿಗ್ ಶಾಕ್. ಹಣ್ಣು, ತರಕಾರಿಗಳ ಏರಿಕೆ ಬೆನ್ನಲ್ಲೇ ಇದೀಗ ಕೋಳಿ ಮಾಂಸದ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ.

Ad Widget . Ad Widget .

ಬೇಡಿಕೆಯಷ್ಟು ಪೂರೈಕೆ ಇಲ್ಲದ ಕಾರಣ ಕೋಳಿ ಮಾಂಸದ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.

Ad Widget . Ad Widget .

ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದ್ದು, ಕೋಳಿ ಮಾಂಸ ರೀಟೈಲ್‌ ವ್ಯಾಪಾರದಲ್ಲಿ ಕೆಜಿಯೊಂದಕ್ಕೆ 220-240 ರು., ರಖಂ ಕೆಜಿಯೊಂದಕ್ಕೆ 210-230 ರು., ಟೈಸನ್‌ ಕೋಳಿ ಕೆಜಿಯೊಂದಕ್ಕೆ 230-250 ರು., ರಖಂ ಕೆಜಿಯೊಂದಕ್ಕೆ 220-240 ರು. ದರದಲ್ಲಿ ಮಾರಾಟವಾಗುತ್ತಿದೆ. ಊರಿನ ಕೋಳಿ ಮಾಂಸ ಕೆಜಿಯೊಂದಕ್ಕೆ 320 -350 ರೂ. ವರೆಗೆ ಮಾರಾಟವಾಗುತ್ತಿದೆ. ಇಡಿ ಕೋಳಿ ಕೆಜಿಯೊಂದಕ್ಕೆ 250- 290 ರುಪಾಯಿ ವರೆಗೆ ಮಾರಾಟವಾಗುತ್ತಿದೆ.

ಕೋಳಿ ಮೊಟ್ಟೆ ಬೆಲೆಯಲ್ಲೂ ಏರಿಕೆ

ಇನ್ನು ಕೋಳಿ ಮೊಟ್ಟೆಬೆಲೆಯಲ್ಲೂ ಭಾರೀ ಏರಿಕೆಯಾಗಿದ್ದು, ಕೋಳಿ ಮೊಟ್ಟೆಯೊಂದಕ್ಕೆ 6.50- 7 ರುಪಾಯಿ ವರೆಗೆ ದರವಿದೆ.ಕಳೆದ ಕೆಲ ದಿನಗಳ ಹಿಂದೆ ಕೋಳಿ ಬೆಲೆ 5.50 ರೂ. ನಿಂದ 6 ರೂವರೆಗೆ ಇತ್ತು. ಆದರೆ ಇದೀಗ ಕೋಳಿ ಮೊಟ್ಟೆ ಬೆಲೆಯಲ್ಲೂ ಏರಿಕೆಯಾಗಿದೆ.

Leave a Comment

Your email address will not be published. Required fields are marked *