Ad Widget .

ಬೀದರ್: ಶಾಲಾ ಬಸ್ ತಡೆದು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ| ನಾಲ್ವರು ಹುಡುಗರ ಬಂಧನ

ಸಮಗ್ರ ನ್ಯೂಸ್: ಕೆಲವು ಹುಡುಗರು ಸೇರಿಕೊಂಡು ಶಾಲಾ ಬಸ್‌ನ್ನು ಅಡಗಟ್ಟಿಬಸ್‌​ನ​ಲ್ಲಿದ್ದ ಅಪ್ರಾಪ್ತ ಬಾಲಕಿ​ಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಹಿನ್ನೆ​ಲೆ​ ಪೋಕ್ಸೋ ಕಾಯ್ದೆ​ಯಡಿ ಪ್ರಕ​ರಣ ದಾಖ​ಲಿ​ಸಿ​ಕೊಂಡು ನಾಲ್ವ​ರನ್ನು ಬಂಧಿಸಿ ನ್ಯಾಯಾಂಗ ಬಂಧ​ನಕ್ಕೆ ಒಪ್ಪಿ​ಸಿದ ಘಟನೆ ಬೀದರ್ ನ‌ ಭಾಲ್ಕಿ ತಾಲೂಕಿನ ಡಾವರಗಾಂವ ದಲ್ಲಿ ನಡೆದಿದೆ.

Ad Widget . Ad Widget .

ಗುರು​ವಾರ ಸಂಜೆ 6ರ ಸುಮಾ​ರಿಗೆ ಕಾಲೇಜಿನ ವಿದ್ಯಾರ್ಥಿ ಅಭಿಶೇಕ ಸಂತೋಷ ಮದರಗಾಂವೆ ಹಾಗೂ ಆತನ ಐದಾರು ಜನ ಸ್ನೇಹಿತರು ಕೂಡಿ 4 ಬೈಕ್‌​ಗಳ ಮೇಲೆ ಶಾಲಾ ಬಸ್ಸಿಗೆ ಅಡ್ಡಗಟ್ಟಿನಿಲ್ಲಿಸಿ ಒಮ್ಮೇಲೆ ಬಸ್ಸಿನೊಳಗೆ ಬಂದು ಪೃಥ್ವಿ​ರಾಜ್‌ ಎಂಬ ವಿದ್ಯಾ​ರ್ಥಿಗೆ ಅವಾಚ್ಯ ಶಬ್ಧಗ​ಳಿಂದ ನಿಂದಿ​ಸಿ​ ಹಲ್ಲೆ ಮಾಡುತ್ತಿದ್ದ ಸಂದರ್ಭ ಜಗಳ ಬಿಡಿ​ಸಲು ಮುಂದಾದ ಅಪ್ರಾಪ್ತ ವಿದ್ಯಾ​ರ್ಥಿ​ನಿಯರ ಖಾಸಗಿ ಅಂಗ​ಗಳನ್ನು ಮುಟ್ಟಿ, ಹಿಂದಕ್ಕೆ ತಳ್ಳಿ ಹಲ್ಲೆ ಮಾಡಿ​ದ್ದಾರೆ.

Ad Widget . Ad Widget .

ನಂತರ ಬಸ್‌ನ ಹಿಂದಿನ ಗಾಜು ಒಡೆದು ಜೀವ ಬೆದ​ರಿ​ಕೆ​ಯೊ​ಡ್ಡಿ​ದ್ದಾ​ರೆ. ಈ ಸಂದ​ರ್ಭ​ದಲ್ಲಿ ಬಸ್‌ ಚಾಲಕ ಸಂಜು​ಕು​ಮಾರ ಸಹ ಹಲ್ಲೆಗೆ ಪ್ರಚೋ​ದನೆ ನೀಡಿ​ದ್ದಾ​ನೆ ಎಂದು ಕಾಲೇ​ಜಿನ ಪ್ರಾಂಶು​ಪಾಲ ಮಸ್ತಾನ್‌ ವಲಿ ಖಟ​ಕ​ಚಿಂಚೋಳಿ ಠಾಣೆ​ಯಲ್ಲಿ ದೂರು ದಾಖ​ಲಾ​ಗಿ​ದೆ.

ಡಾವ​ರ​ಗಾಂವ್‌ ಗ್ರಾಮ ಮೂಲದ ಅಭಿ​ಷೇಕ, ಸಿದ್ಧಲಿಂಗ ಕುಂಬಾ​ರ, ಶೇಖ್‌ ಅವೇಶ ಮಂಜಲಿಸಾಬ, ಶ್ರೀಕಾಂತ ಮೇತ್ರೆ, ಕುರಬಬೇಳಗಿ ಗ್ರಾಮದ ಮಲಿಕಾರ್ಜುನ ಮೇತ್ರೆ, ಮಹೇಂದ್ರ ವೆಂಕಟ ಮೇತ್ರೆ ಹಾಗೂ ಬಸ್‌ ಚಾಲಕ ಸಂಜು​ಕು​ಮಾರ ವಿರುದ್ಧ ದೂರು ದಾಖ​ಲಿ​ಸಿದ್ದು ತಪ್ಪಿ​ತ​ಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಖಟ​ಕ​ಚಿಂಚೋಳಿ ಪೊಲೀಸ್‌ ಠಾಣೆ​ಯಲ್ಲಿ ಕಲಂ 109,323,341,427,504,506 ಜೊತೆ 149 ಐಪಿಸಿ ಮತ್ತು ಕಲಂ: 08 ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Leave a Comment

Your email address will not be published. Required fields are marked *