Ad Widget .

ಪಾಣತ್ತೂರಿನ ಪೆರಿಯಾರಂ ಬಳಿ ಟ್ಯಾಂಕರ್ ಪಲ್ಟಿ

ಸಮಗ್ರ ನ್ಯೂಸ್: ಮಂಗಳೂರಿಂದ ಡಿಸೇಲ್ ಹೇರಿಕೊಂಡು ಕರಿಕೆ ಬಾಗಕ್ಕೆ ಬರತ್ತಿದ್ದ ಟ್ಯಾಂಕರ್ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಇಬ್ಬರು ಗಂಭೀರ ಸ್ವರೂಪದ ಗಾಯಗೊಂಡಿದ್ದಾಗಿ ತಿಳಿದುಬಂದಿದೆ.

Ad Widget . Ad Widget .

ಗಾಯಾಳುಗಳ ಹೇಳಿಕೆಯಂತೆ ಮತ್ತೋರ್ವನಿಗೆ ಹುಡುಕಾಟ ನಡೆಸಲಾಗುತ್ತಿದೆ, ಗಂಭೀರ ಗಾಯಗೊಂಡಿರುವ ಟ್ಯಾಂಕರ್ ಚಾಲಕ ಮತ್ತು ಮತ್ತೋರ್ವನನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ಹಲವು ಪಲ್ಟಿ ಹೊಡೆದಿದ್ದು

Ad Widget . Ad Widget .

ಅಪಘಾತದಲ್ಲಿ ಟ್ಯಾಂಕರ್ ನಜ್ಜುಗುಜ್ಜಾಗಿದ್ದು , ತುಂಬಿರುವ ಡೀಸೆಲ್ ಅಲ್ಪ ಪ್ರಮಾಣದಲ್ಲಿ ಸೋರಿಕೆಯಾಗುತ್ತಿರುವುದಾಗಿ ತಿಳಿದು ಬಂದಿದೆ.

ಕಳೆದ ವರ್ಷ ಇದೇ ಪ್ರದೇಶದಲ್ಲಿ ಸುಳ್ಯದಿಂದ ತೆರಳುತ್ತಿದ್ದ ಕೇರಳ ಬಸ್ ಪಲ್ಟಿಯಾಗಿ 7 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಈ ಬೀಕರ ಅಪಘಾತ ನೆನಪು ಮಾಸುವ ಮುನ್ನ ಅದೇ ಸ್ಥಳದಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ.

Leave a Comment

Your email address will not be published. Required fields are marked *