ಸುಳ್ಯ:ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು

ಸಮಗ್ರ ನ್ಯೂಸ್: ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು ಅವರನ್ನು ನೇಮಕ‌ ಮಾಡಿ ಸರಕಾರ ಆದೇಶ ಮಾಡಿದೆ.

Ad Widget ... ..

ಕಳೆದ ಎರಡು ವರ್ಷಗಳಿಂದ ದಿಲೀಪ್ ಸುಳ್ಯ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ 2014ನೇ ಬ್ಯಾಚ್‌ನ ಅಧಿಕಾರಿಯಾದ ಈರಯ್ಯ ದೂಂತೂರು ಅವರು ನೇಮಕ ಗೊಂಡಿದ್ದಾರೆ. ಇನ್ನೂ ಇವರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್‌ಐ ಆಗಿ ಬಳಿಕ ಬೆಳ್ಳಾರೆ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದರು. ಬಳಿಕ ಉಪ್ಪಿನಂಗಡಿ, ಶಿರಸಿಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಕುಂದಾಪುರದಲ್ಲಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Ad Widget

ಖಡಕ್ ಅಧಿಕಾರಿಯಾದ ಈರಯ್ಯ ದೂಂತೂರು ಕವಿ, ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ. ಇವರು ಮೂಲತಃ ಬೆಂಗಳೂರಿನವರು.

Leave a Comment

Your email address will not be published. Required fields are marked *