Ad Widget .

ಮಡಿಕೇರಿ ನಗರೋತ್ತಾನ ಯೋಜನೆಯಲ್ಲಿ ಕಳಪೆ ಕಾಮಗಾರಿ| ಸಾರ್ವಜನಿಕರು ಆಕ್ರೋಶ

ಸಮಗ್ರ ನ್ಯೂಸ್ : ಕೊಡಗು ಜಿಲ್ಲೆಯ ಮಡಿಕೇರಿ ನಗರ ಸಭೆಗೆಯ ನಗರೋತ್ತಾನ ಯೋಜನೆಯಲ್ಲಿ ಮಡಿಕೇರಿ ನಗರದ ಹಲವು ಭಾಗದಲ್ಲಿ ರಸ್ತೆ ಮರು ಡಾಂಬರೀಕರಣ ಈಗಾಗಲೇ ಆರಂಭಿಸಿದ್ದು ಎಲ್ಲ ರಸ್ತೆ ಕಾಮಗಾರಿಗಳು ಕಳಪೆ ಕಾಮಗಾರಿ ಆಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದು ಕಾಣುತ್ತಿದೆ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ಇನ್ನೂ ಕೆಲವು ಭಾಗದಲ್ಲಿ ಈಗಾಗಲೇ ಡಾಂಬರ್ ಕಿತ್ತು ಬರುತ್ತಿದ್ದು ಹಾಗೂ ಹಲವು ಭಾಗದಲ್ಲಿ ಈಗಾಗಲೇ 8-10 ತಿಂಗಳಲ್ಲಿ ನಿರ್ಮಿಸಿದಂತ ಕಾಂಗ್ರೆಟ್ ರಸ್ತೆಗಳ ಮೇಲೆ ಮತ್ತೆ ಡಾಂಬರು ಮಾಡುತ್ತಿರುವುದು ಕಂಡು ಬರುತ್ತಿದ್ದು ಈ ರೀತಿಯ ಕೆಲಸಗಳ ಬಗ್ಗೆ ಸಾರ್ವಜನಿಕ ಮಡಿಕೇರಿ ನಗರ ಸಭೆ ಗಮನಕೆ ತಂದಾಗ ನಗರಸಭೆಯು ಹಳೆಯ ಕಾಂಕ್ರೀಟ್ ರಸ್ತೆ ಮೇಲೆ ನೀರು ನಿಲ್ಲುತ್ತಿದೆ ಆದ್ದರಿಂದ ಮರು ಡಾಂಬರೀಕರಣ ಮಾಡುತ್ತಿದ್ದೇವೆ ಎಂದು ಕಾಟಾಚಾರದ ಉತ್ತರ ನೀಡುತ್ತಿದ್ದಾರೆ.

Ad Widget . Ad Widget .

ಹಾಗಾದರೆ ಕಾಂಕ್ರೀಟ್ ರಸ್ತೆ ಮಾಡುವಾಗ ನಗರಸಭೆ ಆಡಳಿತ ಮಂಡಳಿಯಾಗಲಿ ಅಧಿಕಾರಿಗಳಾಗಲಿ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈಗ ನೀರು ನಿಲ್ಲುತ್ತಿದೆ ಎಂಬ ನೆಪಕ್ಕೆ ಮರು ಡಾಂಬರೀಕರಣ ಮಾಡಿ ಜನರ ತೆರಿಗೆ ಹಣವನ್ನು ನೀರಲ್ಲಿ ಪೋಲು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಡಿಕೇರಿ ನಗರಸಭೆ ಗೆ ಈ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದರು ಇದುವರೆಗೆ ಕ್ರಮ ತೆಗೆದುಕೊಳ್ಳದೆ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು ನಮ್ಮ ಕೊಡಗು ಜಿಲ್ಲೆಗೆ ಅವಶ್ಯಕತೆ ಇಲ್ಲ ಅಂತಹ ಅಧಿಕಾರಿಗಳ ವಿರುದ್ಧ ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಶಾಸಕರಲ್ಲಿ ದೂರು ನೀಡುವುದಾಗಿ ಕೊಡಗು ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ರವಿಗೌಡ ಹೇಳಿದರು.

Leave a Comment

Your email address will not be published. Required fields are marked *