ಸಮಗ್ರ ನ್ಯೂಸ್: ಎಸ್ ಎಲ್ ವಿ ಪ್ರೊಡಕ್ಷನ್ ಹೌಸ್ ನಲ್ಲಿ ದಿವಾಕರ ದಾಸ್ ನಿರ್ಮಾಣ ವಿನು ಬಳಂಜ ನಿರ್ದೇಶನದಲ್ಲಿ ತಯಾರಾದ ವಿಭಿನ್ನ ಕಥಾವಸ್ತು ಒಳಗೊ೦ಡಿರುವ “ಬೇರ“ಕನ್ನಡ ಚಲನಚಿತ್ರ ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ಶುಕ್ರವಾರ ಬೆಳಗ್ಗೆ ಬಿಡುಗಡೆ ಗೊಂಡಿತು.
ಚಲನ ಚಿತ್ರ ನಿರ್ಮಾಪಕ,ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತಾಡಿದ ಅವರು, “ಇಂದು ಕರ್ನಾಟಕ ರಾಜ್ಯದಾದ್ಯಂತ ಬೇರ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಹಿಂದೂ ಮುಸ್ಲಿಮರ ಬಾಂಧವ್ಯದ ಕತೆ ಇರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಚಿತ್ರಪ್ರೇಮಿಗಳು ಸಾಮಾಜಿಕ ಸಾಮರಸ್ಯ ಸಾರುವ ಇಂತಹ ಚಿತ್ರಗಳನ್ನು ಬೆಂಬಲಿಸಬೇಕು” ಎಂದರು.
ಬಳಿಕ ನಟ ಸ್ವರಾಜ್ ಶೆಟ್ಟಿ ಮಾತನಾಡಿ, “ಇದೊಂದು ಡಿಫರೆಂಟ್ ಕಥಾ ಹಂದರವನ್ನು ಒಳಗೊಂಡ ಸಿನಿಮಾ. ಇದರಲ್ಲಿ ಅನೇಕ ಹಿರಿಕಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ಅವರಿಗೆ ನಿಮ್ಮೆಲ್ಲರ ಪ್ರೋತ್ಸಾಹದ ಅಗತ್ಯವಿದೆ. ಚಿತ್ರ ನೋಡಿ ಕಲಾವಿದರನ್ನು ಪ್ರೋತ್ಸಾಹಿಸಿ” ಎಂದರು.
ಹಿರಿಯ ರಂಗಕರ್ಮಿ ವಿ. ಜಿ. ಪಾಲ್, ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಎಂ. ಕೆ. ಮಠ, ಪ್ರಕಾಶ್ ಪಾಂಡೇಶ್ವರ್, ಕಿಶೋರ್ ಶೆಟ್ಟಿ, ಉದ್ಯಮಿ ಪ್ರೇಮ್ ಶೆಟ್ಟಿ, ಜಾನ್ಸನ್ ಮಾರ್ಟೀಸ್, ಎಕೆ ವಿಜಯ ಕೋಕಿಲ, ನಟರಾದ ದೀಪಕ್ ರೈ ಪಾಣಾಜೆ, ತಮ್ಮಣ್ಣ ಶೆಟ್ಟಿ, ಸ್ವರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿಭಿನ್ನ “ಬೇರ” ಕಥಾವಸ್ತು!
ಮಂಗಳೂರಿನ ನಿರ್ದೇಶಕ ವಿನು ಬಳಂಜ ಅವರು ಮಾನವ ಕುಲದ ಒಳಿತಿಗಾಗಿ ಇರುವ ಧರ್ಮ ಸ್ವಾರ್ಥ ಸಾಧನೆಗಾಗಿ ಬಳಕೆಯಾದಾಗ ಅದರಿಂದ ಆಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲುವ ಕಥಾವಸ್ತುವನ್ನು “ಬೇರ” ಚಲನಚಿತ್ರ ಹೊ೦ದಿದೆ. “ಬೇರ” ಎಂದರೆ ವ್ಯಾಪಾರ. ಮೌಲ್ಯಗಳು ವ್ಯಾಪಾರದ ಸರಕು ಆಗಬಾರದು. ವ್ಯಾಪಾರದ ಸರಕು ಆದಾಗ ಮಾನವೀಯತೆ ಮೌನವಾಗುತ್ತದೆ. ಇಂತಹ “ಬೇರ”ಗಳನ್ನು ಮೀರಿ ನಿಂತಾಗ ಸುಂದರ ಬದುಕು, ಸಮೃದ್ಧ ಸಮಾಜ ನಿರ್ಮಾಣವಾಗುತ್ತದೆ ಎಂಬುದು ಸಿನಿಮಾದ ತಿರುಳು ಆಗಿರುತ್ತದೆ.
ಚಿತ್ರದ ಪ್ರೊಡಕ್ಷನ್ ಹೌಸ್ ಎಸ್ ಎಲ್ ವಿ ಕಲರ್ಸ್, ಪ್ರೊಡ್ಯೂಸರ್ ದಿವಾಕರ ದಾಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರಾಮದಾಸ್ ಶೆಟ್ಟಿ, ಡಿಒಪಿ ರಾಜಶೇಖರ ರಮಾತ್ನಲ್, ಸಂಗೀತ ಮಣಿಕಾಂತ್ ಕದ್ರಿ, ಎಡಿಟಿಂಗ್ ಶ್ರೀಕಾಂತ್ ಕೋ ಡೈರೆಕ್ಟರ್ ಸುಭಾಷ್ ಅರ್ವ.
ತಾರಾಗಣದಲ್ಲಿ ಸುಮನ್ ತಲ್ವಾರ್, ಹರ್ಷಿಕಾ ಪೂಣಚ್ಚ, ಹರ್ಷವರ್ಧನ್, ಅರವಿಂದ್ ರಾವ್, ರಾಕೇಶ್ ಮಯ್ಯ ದತ್ತಣ್ಣ, ಅಶ್ವಿನ್ ಹಾಸನ್, ಯಶ್ ಶೆಟ್ಟಿ, ಶೈನ್ ಶೆಟ್ಟಿ, ಸ್ವರಾಜ್ ಶೆಟ್ಟಿ, ದೀಪಕ್ ರೈ ಪಾಣಾಜೆ, ತಮ್ಮಣ್ಣ ಶೆಟ್ಟಿ ರಾಜಶೇಖರ ಶೆಟ್ಟಿ, ಮಂಜುನಾಥ್ ಹೆಗ್ಡೆ ಎಂ .ಕೆ.ಮಠ , ಚಿತ್ಕಲ ಬಿರಾದಾರ್, ಅಂಜಲಿ, ಶೋಭರಾಣಿ, ಶಾಂತಲಾ ಕಾಮತ್, ಗುರು ಹೆಗ್ಡೆ ಸಬಿತ ಕಾಮತ್, ಧವಲ್ ಪ್ರಸನ್ನ, ಪ್ರದೀಪ್ ಚಂದ್ರ ಕುತ್ಪಾಡಿ, ಗಿರೀ ಶ್ ಚಿತ್ರದಲ್ಲಿದ್ದಾರೆ.