Ad Widget .

ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್ ಜಾಯ್| ಬಿರುಗಾಳಿ ; ರಕ್ಕಸ ಅಲೆಗಳಿಗೆ ಕರಾವಳಿ ತತ್ತರ

ಸಮಗ್ರ ನ್ಯೂಸ್: ಬಿಪರ್​ಜಾಯ್ ಚಂಡಮಾರುತ ಗುರುವಾರ ರಾತ್ರಿ ಗುಜರಾತ್​ನ ಸೌರಾಷ್ಟ್ರ ಮತ್ತು ಕಛ್ ಕರಾವಳಿಗೆ ಅಪ್ಪಳಿಸಿದೆ. 125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ.

Ad Widget . Ad Widget .

ಕಛ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್ಗರ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ, ಮಳೆ ಆಗುತ್ತಿದೆ. ತಗ್ಗು ಪ್ರದೇಶಗಳು ಮುಳುಗಡೆ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಸಮುದ್ರದಲ್ಲಿ 2-3 ಮೀಟರ್ ಎತ್ತರದ ಅಲೆ ಏಳಲಿದೆ ಎಂದು ಅಂದಾಜಿಸಲಾಗಿದೆ. ಜನರು ಸಮುದ್ರದ ಬಳಿ ಹೋಗುವುದನ್ನು ನಿರ್ಬಂಧಿಸಲಾಗಿದೆ. ಎಲ್ಲಾ ಬೀಚ್​ಗಳಲ್ಲಿ ಜೀವರಕ್ಷಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

ಗುಜರಾತ್​ನ ಹಲವಾರು ಭಾಗಗಳಲ್ಲಿ ಗುರುವಾರ ಸಂಜೆ ವರೆಗೆ 20 ಮಿಲಿ ಮೀಟರ್​ಗಿಂತ ಹೆಚ್ಚು ಮಳೆಯಾಗಿದೆ. ಹುಲ್ಲುಹಾಸಿನ ಮನೆಗಳು, ಕಚ್ಚಾಮನೆಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜನರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಜಿಲ್ಲಾ ಅಧಿಕಾರಿಗಳು ವ್ಯಾಪಕ ಸಿದ್ಧತೆ ಕೈಗೊಂಡಿದ್ದಾರೆ. ರಾಜ್ಯದ ವಿದ್ಯುತ್ ಮತ್ತು ರಸ್ತೆ ಇಲಾಖೆಗಳ ಅಧಿಕಾರಿಗಳು ಗೊತ್ತುಪಡಿಸಿದ ಸ್ಥಳಗಳನ್ನು ತಲುಪಿದ್ದಾರೆ. ರೇಡಿಯೋ ಸೆಟ್​ಗಳು ಮತ್ತು ಉಪಗ್ರಹ ಫೋನ್​ಗಳನ್ನು ಹೊಂದಿದ ತಂಡಗಳನ್ನು ನಿಯೋಜಿಸಲಾಗಿದೆ.

Leave a Comment

Your email address will not be published. Required fields are marked *