ಸಮಗ್ರ ನ್ಯೂಸ್: ಜಿಂಕೆಗಳು ಪ್ರಾಥಮಿಕವಾಗಿ ಸಸ್ಯಹಾರಿ ಪ್ರಾಣಿಗಳು. ಹುಲ್ಲು ಸೊಪ್ಪು, ಎಲೆಗಳನ್ನು ತಿನ್ನುತ್ತಾ ಬದುಕುತ್ತವೆ. ಜಿಂಕೆಗಳನ್ನು ಇತರ ಪ್ರಾಣಿಗಳು ಬೇಟೆಯಾಡುತ್ತವೇ ಹೊರತು, ಈ ಸಾದು ಪ್ರಾಣಿ ಇತರ ಜೀವಿಗಳಿಗೆ ತೊಂದರೆ ನೀಡುವುದಿಲ್ಲ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.
ಜಿಂಕೆಯು ಹಾವನ್ನು ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಫಿಗೆನ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಾನು ಮೊದಲ ಬಾರಿಗೆ ಜಿಂಕೆಯೊಂದು ಹಾವನ್ನು ತಿನ್ನುವುದನ್ನು ನೋಡಿದ್ದು, ಜಿಂಕೆಗಳು ಹುಲ್ಲು ತಿನ್ನುವುದಿಲ್ಲವೇ? ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಕಾರಿನಲ್ಲಿ ರಸ್ತೆ ಮೂಲಕ ಸಾಗುತ್ತಿದ್ದ ವ್ಯಕ್ತಿಯೊಬ್ಬರು, ಅಲ್ಲಿಯೇ ರಸ್ತೆ ಪಕ್ಕದಲ್ಲಿ ಜಿಂಕೆಯೊಂದು ಹಾವನ್ನು ತಿನ್ನುತ್ತಿರುರುವುದನ್ನು ಗಮನಿಸಿದ್ದಾರೆ. ಇದೆಂತಹ ವಿಚಿತ್ರ ಎಂದು ಅಲ್ಲಿಯೇ ಕಾರ್ ನಿಲ್ಲಿಸಿ ಜಿಂಕೆ ಹಾವನ್ನು ತಿನ್ನುತ್ತಿರುವುದನ್ನು ವೀಡಿಯೋ ಮಾಡಿದ್ದಾರೆ.
ವೀಡಿಯೋದಲ್ಲಿ ಮುದ್ದಾದ ಜಿಂಕೆಯೊಂದು ಶಾಂತ ರೀತಿಯಲ್ಲಿ ಹಾವೊಂದನ್ನು ಬಾಯಿಯಲ್ಲಿ ನೇತುಹಾಕಿಕೊಂಡು ಅಗಿಯುತ್ತಾ ತಿನ್ನುತ್ತಿರುವುದನ್ನು ಕಾಣಬಹುದು.