Ad Widget .

ಕಾಂತಾರ 2 ರಿಲೀಸ್ ಗೆ ಮುಹೂರ್ತ ಫಿಕ್ಸ್ |ಸಿನಿಮಾ ರಿಲೀಸ್ ಯಾವಾಗ?

ಸಮಗ್ರ ನ್ಯೂಸ್: ಕನ್ನಡದ ಕಾಂತಾರ ಸಿನಿಮಾ ದೇಶದಾದ್ಯಂತ ಸ್ಯಾಂಡಲ್ ವುಡ್‌ನ ಇತಿಹಾಸ ಪುಟ ಸೇರಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಬಿಗ್ ಮ್ಯಾಜಿಕ್ ಮಾಡಿದ್ರು. ಫ್ಯಾನ್ ಇಂಡಿಯಾ ಪಟ್ಟ ಗಿಟ್ಟಿಸಿಕೊಂಡ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾ ಸಕ್ಸಸ್ ಸಮಾರಂಭದಲ್ಲಿ ಕಾಂತಾರಾ 2 ಸಿನಿಮಾ ಘೋಷಿಸಿದ್ರು. “ಈಗ ನೋಡಿರೋದು ಕಾಂತಾರ 2 ಮುಂದೆ ನೋಡೋದು ಕಾಂತಾರ ಪ್ರೀಕ್ವೆಲ್” ಎಂದು ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ರು. ಇದೀಗ ಕಾಂತಾರ 2 ಸಿನಿಮಾದ ಹೊಸ ಅಪ್ಡೇಟ್ ಹೊರಬಿದ್ದಿದ್ದು, ರಿಷಬ್ ಶೆಟ್ಟಿ ಅಭಿಮಾನಿಗಳು ಕೂಡ ಫುಲ್ ಖುಷಿ ಆಗಿದ್ದಾರೆ.

Ad Widget . Ad Widget .

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಕಾಂತಾರ ಸಿನಿಮಾ ಎಲ್ಲರ ಮನ ಮುಟ್ಟಿತ್ತು. ಮತ್ತೊಮ್ಮೆ ಪ್ರೇಕ್ಷರ ಮನ ಗೆಲ್ಲಲ್ಲು ಕಾಂತಾರ 2 ಸಿನಿಮಾ ಮೂಲಕ ರಿಷಬ್ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ. ಕಾಂತಾರ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬಳಿಕ ಪಾರ್ಟ್-2 ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಯುಗಾದಿಯ ಹಬ್ಬದ ವೇಳೆ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಸ್ಕ್ರಿಪ್ಟ್ ಕೆಲಸವನ್ನು ಪ್ರಾರಂಭಿಸಿದ್ದರು. ಸ್ಕಿಪ್ಟ್ ಕೆಲಸವೆಲ್ಲಾ ಮುಗಿಸಿದ ರಿಷಬ್ ಶೆಟ್ಟಿ ಸಿನಿಮಾ ಶೂಟಿಂಗ್ ಆರಂಭಿಸಲು ಸಜ್ಜಾಗಿದ್ದಾರೆ. ಸಿನಿಮಾ ಮುಹೂರ್ತಕ್ಕೆ ಡೇಟ್ ಫಿಕ್ಸ್ ಮಾಡಲು ನಿರ್ದೇಶಕ ಹಾಗೂ ನಿರ್ಮಾಪಕರು ಮುಂದಾಗಿದ್ದಾರೆ. ಆಗಸ್ಟ್ ನಲ್ಲಿ ಸೆಟ್ ಏರಲಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಿನಿಮಾ ಶೂಟಿಂಗ್ ಮಳೆಗಾಲಕ್ಕಾಗಿ ಕಾಯುತ್ತಿದ್ದ ಸಿನಿಮಾ ತಂಡ ಇದೀಗ ಆಗಸ್ಟ್ 27ರಂದು ಕಾಂತಾರ 2 ಸಿನಿಮಾ ಮುಹೂರ್ತಕ್ಕೆ ದಿನಾಂಕ ನಿಗಧಿಯಾಗಿದೆ ಎನ್ನಲಾಗಿದೆ. ಆಗಸ್ಟ್ 27ಕ್ಕೆ ಮುಹೂರ್ತ ಪೂಜೆಯ ಬಳಿಕ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Ad Widget . Ad Widget .

ಕಾಂತಾರ ಮೊದಲ ಭಾಗದ ಮುಹೂರ್ತ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತ್ತು. ಇದೀಗ ಕಾಂತಾರ 2 ಸಿನಿಮಾ ಮುಹೂರ್ತವನ್ನು ಕೂಡ ಅದೇ ಜಾಗದಲ್ಲಿ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇನ್ನು ವಿಶೇಷ ಅಂದರೆ ಮೊದಲ ಭಾಗದ ಸಿನಿಮಾ ಮುಹೂರ್ತ ಕೂಡ ಆಗಸ್ಟ್ ತಿಂಗಳಲ್ಲೇ ನೆರವೇರಿತ್ತು. ಇದೀಗ ಪ್ರಿಕ್ವೆಲ್ ಮುಹೂರ್ತವನ್ನು ಸಹ ಅದೇ ಜಾಗದಲ್ಲಿ, ಅದೇ ತಿಂಗಳಲ್ಲಿ ಮಾಡುತ್ತಿರುವುದು ವಿಶೇಷವಾಗಿದೆ.

ಈ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದು, ಮುಂದಿನ ವರ್ಷ 2024ಕ್ಕೆ ಕಾಂತಾರ 2 ಸಿನಿಮಾ ಜನರ ಮುಂದೆ ಬರಲಿದೆ ಎಂದು ತಿಳಿದು ಬಂದಿದೆ. ಕಾಂತಾರ ಮೊದಲ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದ್ದು, ಇದೀಗ ಕಾಂತರ 2 ಚಿತ್ರದ ಮೇಲಿನ ನಿರೀಕ್ಷೆಯು ಸಹ ಡಬಲ್ ಆಗಿದೆ.

Leave a Comment

Your email address will not be published. Required fields are marked *