ಸಮಗ್ರ ನ್ಯೂಸ್:ಮದುವೆ ಮುಗಿಸಿ ವಾಪಾಸ್ಸಾಗುತ್ತಿದ್ದ 103 ಮಂದಿ ದೋಣಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಆಫ್ರಿಕಾದ ಉತ್ತರ ನೈಜೀರಿಯಾದಲ್ಲಿ ಸಂಭವಿಸಿದೆ.
ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ (AP) ಪ್ರಕಾರ, ಉತ್ತರ ನೈಜೀರಿಯಾದಿಂದ 103 ಜನರು ದೋಣಿಯಲ್ಲಿ ಮದುವೆಯಿಂದ ಹಿಂತಿರುಗುತ್ತಿದ್ದರು. ಈ ವೇಳೆ ದೋಣಿ ಮಗುಚಿದ ಘಟನೆ ನಡೆದಿದೆ. ಎಪಿ ಪ್ರಕಾರ, 100 ಕ್ಕೂ ಹೆಚ್ಚು ಜನರು ದೋಣಿಯಲ್ಲಿ ಮದುವೆಯಿಂದ ಹಿಂತಿರುಗುತ್ತಿದ್ದರು. ಇದೇ ವೇಳೆ ಹಠಾತ್ ಓವರ್ ಲೋಡ್ ನಿಂದಾಗಿ ಬೋಟ್ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಸುಮಾರು 103 ಮಂದಿ ಸಾವನ್ನಪ್ಪಿದ್ದಾಗಿ ವರದಿ ಮಾಡಿದೆ.
ಇತರ ಜನರನ್ನು ರಕ್ಷಿಸಲು ಪೊಲೀಸರು ಮತ್ತು ಸ್ಥಳೀಯ ಜನರು ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಮಾಹಿತಿಯ ಪ್ರಕಾರ, ಅಪಘಾತದ ನಂತರ ಅನೇಕ ಮೃತದೇಹಗಳು ಪತ್ತೆಯಾಗಿವೆ. ಇದೇ ವೇಳೆ ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.
ಸಿಎನ್‌ಎನ್ ವರದಿಯ ಪ್ರಕಾರ, ಈ ದೋಣಿ ಅಪಘಾತ ನೈಜರ್ ನದಿಯಲ್ಲಿ ಸಂಭವಿಸಿದೆ. ದೋಣಿಯಲ್ಲಿ ಸುಮಾರು 300 ಮಂದಿ ಇದ್ದರು ಎಂದು ಹೇಳಲಾಗುತ್ತಿದೆ. ಈ ಘಟನೆ ಸೋಮವಾರ ನಡೆದಿದೆ ಎಂದು ಕಪಾಡಾದ ಸಾಂಪ್ರದಾಯಿಕ ಮುಖ್ಯಸ್ಥ ಅಬ್ದುಲ್ ಗಣ ಲುಕ್ಪಾಡಾ ಹೇಳಿದ್ದಾರೆ.