Ad Widget .

ಬಿಜೆಪಿ ನಾಯಕರ ಜೊತೆ ಸಿದ್ದರಾಮಯ್ಯ ಹೊಂದಾಣಿಕೆ ಮಾಡ್ಕೊಂಡು ಬಿಜೆಪಿಗೆ ಸೋಲಾಯ್ತಾ? ಸಂಚಲನ ಸೃಷ್ಟಿಸಿದ ಕೇಸರಿ ಕಲಿಗಳ ಹೇಳಿಕೆ

ಸಮಗ್ರ ನ್ಯೂಸ್: ಸಿದ್ದರಾಮಯ್ಯ, ಕಾಂಗ್ರೆಸ್ ಜೊತೆ ಬಿಜೆಪಿ ನಾಯಕರು ಮಾಡಿಕೊಂಡ ಹೊಂದಾಣಿಕೆಯೇ ಈ ಹೀನಾಯ ಸೋಲಿಗೆ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಸಿಟಿವಿ ರವಿ, ಸುನಿಲ್ ಕುಮಾರ್ ಕೂಡ ಇದೇ ಆರೋಪ ಮಾಡಿದ್ದಾರೆ. ಇದೀಗ ರಾಜ್ಯ ಬಿಜೆಪಿ ಪ್ರಮುಖ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೊಂದಾಣಿಕೆ ರಾಜಕೀಯದಿಂದಲೇ ಸೋಲಾಗಿದೆ ಅನ್ನೋ ಆರೋಪ ಹೆಚ್ಚಾಗುತ್ತಿದೆ.

Ad Widget . Ad Widget .

ಖುದ್ದು ಬಿಜೆಪಿ ನಾಯಕರೇ ಈ ಆರೋಪ ಮಾಡುತ್ತಿದ್ದಾರೆ. ಮೊನ್ನೆ ಸಿಟಿ ರವಿ, ಇದೀಗ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಆರೋಪಕ್ಕೆ ಆರೋಪಕ್ಕೆ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಸುಮ್ಮನೆ ಆರೋಪ ಮಾಡುವುದಲ್ಲ, ಹೆಸರು ಘೋಷಣೆ ಮಾಡಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದ್ದಾರೆ.

Ad Widget . Ad Widget .

ಬಿಜೆಪಿ ಹಿರಿಯ ನಾಯಕರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸ್ಪಷ್ಟ ಮಾಹಿತಿ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಸಿ.ಟಿ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ್ದು, ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡ್ತೀವಿ. ಕಾಂಗ್ರೆಸ್‌ನವರು ನವರು ಒಂದಷ್ಟು ಆರೋಪಗಳನ್ನು ನಮ್ಮ ಮೇಲೆ ಮಾಡಿದ್ದರು. ಅದನ್ನೆಲ್ಲ ಕಾಂಗ್ರೆಸ್‌ನವರು ಈಗ ಸಾಬೀತು ಮಾಡಿ ತೋರಿಸಲಿ. ಎಲ್ಲಾ ಪಾರ್ಟಿಯಲ್ಲೂ ಹೊಂದಾಣಿಕೆ ರಾಜಕೀಯ ಮಾಡೋರು ಇದ್ದಾರೆ. ಇದಕ್ಕೆ ಬಿಜೆಪಿಯೂ ಹೊರತಲ್ಲ. ನೇರವಾಗಿ ಮಾತಾಡೋರ ಮೇಲೆ ಮುಗಿಬೀಳುತ್ತಾರೆ. ಪಕ್ಷದ ಸೂಕ್ತ ವೇದಿಕೆಯಲ್ಲಿ ಹೊಂದಾಣಿಕೆ ರಾಜಕಾರಣಿದ ಬಗ್ಗೆ ಚರ್ಚೆ ಮಾಡ್ತೇವೆ. ಬಹಿರಂಗವಾಗಿ ಹೇಳೊಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ ರಾಜಕೀಯ ಚದುರಂಗದಾಟದಲ್ಲಿ ಈ ರೀತಿಯ ಹೇಳಿಕೆಗಳು ಚರ್ಚೆಗೆ ಎಡೆಮಾಡಿವೆ ಅನ್ನೋ ಮಾತಂತೂ ಸುಳ್ಳಲ್ಲ.

Leave a Comment

Your email address will not be published. Required fields are marked *