Ad Widget .

Weather report|ಬಿಪರ್ ಜಾಯ್ ಚಂಡಮಾರುತ ಎಫೆಕ್ಟ್| ರಾಜ್ಯದಲ್ಲಿ ದುರ್ಬಲಗೊಂಡ ಮುಂಗಾರು| ಕಂಗಾಲಾದ ರೈತಾಪಿ ವರ್ಗ

ಸಮಗ್ರ ನ್ಯೂಸ್: ಬೀಪರ್ ಚಾಯ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ದುರ್ಬಲಗೊಂಡಿದ್ದು, ರೈತರ ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

Ad Widget . Ad Widget .

ಬಿಪರ್ ಚಂಡಮಾರುತದ ಪರಿಣಾಮ ನೃಋತ್ಯ ಮಾನ್ಸೂನ್ ಕ್ಷೀಣವಾಗಿದ್ದು, ಮುಂಗಾರು ಮಳೆ ರಾಜ್ಯಾದ್ಯಂತ ವ್ಯಾಪಿಸಲು ವಿಳಂಬವಾಗಲಿದೆ.

Ad Widget . Ad Widget .

ಇದರಿಂದಾಗಿ ಕೃಷಿ ಚಟುವಟಿಕೆಗಳಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. ಮಾನ್ಸೂನ್ ಪ್ರಬಲವಾದರೆ ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬೇಕಿತ್ತು. ಆದರೆ ಈ ಭಾಗದಲ್ಲಿ ಹೆಚ್ಚಿನ ಮಳೆ ಬೀಳುವ ಬದಲು ಸಾಧಾರಣವಾಗಿ ಮಳೆಯಾಗುತ್ತಿದೆ.

ಕಳೆದ ಬಾರಿಗಿಂತ ಈ ಬಾರಿ ಶೇ. 37 ರಷ್ಟು ಮಳೆ ಕೊರತೆಯಾಗಿದ್ದು, ಈ ವೇಳೆ ರಾಜ್ಯದಲ್ಲಿ ಮುಂಗಾರು ಚರುಕುಗೊಳ್ಳಬೇಕಿತ್ತು. ಕೃಷಿ ಚಟುವಟಿಕೆಗಳೂ ಚುರುಕಾಗಬೇಕಿತ್ತು. ಆದರೆ ಮಳೆ ವಿಳಂಬಾಗಿರುವುದರಿಂದ ಬಿತ್ತನೆ ಕಾರ್ಯಗಳಿಗೆ ಅಣಿಯಾಗಿದ್ದ ರೈತರಿಗೆ ಮಳೆ ವಿಳಂಬ ಹಿನ್ನೆಲೆಯಲ್ಲಿ ಬಿಗ್ ಶಾಕ್ ಎದುರಾಗಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಪರಿಣಾಮ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.

ಮಂಗಳೂರು, ಕೊಲ್ಲೂರು, ಶಹಪುರ, ಕಾರವಾರ, ಶಿರಾಲಿ, ಜಾನ್ಮನೆ, ಕುಂದಾಪುರ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಉಡುಪಿ, ಕುರ್ಡಿ, ಮಾನ್ವಿ, ದಾವಣಗೆರೆ, ಯುಗಟಿ, ಕೊಟ್ಟಿಗೆಹಾರ, ಕೂಡ್ಲಿಗಿ, ಕೊಟ್ಟೂರು, ಮಂಕಿ, ಕುಮಟಾ, ಗೋಕರ್ಣ, ಬೇಲಿಕೇರಿ, ಅಂಕೋಲಾ, ಸಿದ್ದಾಪುರ, ಪುತ್ತೂರು, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಭಾಲ್ಕಿ, ಹೊಸಕೋಟೆ, ಚನ್ನಗಿರಿ, ಭಾಗಮಂಡಲ, ಕಮ್ಮರಡಿ, ಚನ್ನಪಟ್ಟಣ, ಹರಪನಹಳ್ಳಿ, ಗೇರುಸೊಪ್ಪ, ಕ್ಯಾಸಲ್​ರಾಕ್, ಶಿರಹಟ್ಟಿ, ಚಿತ್ತಾಪುರ, ಚಿಂಚೋಳಿ, ಸೇಡಂ, ನಾಪೋಕ್ಲು, ವಿರಾಜಪೇಟೆ, ಕಳಸ, ಕಡೂರು, ಲಿಂಗನಮಕ್ಕಿಯಲ್ಲಿ ಮಳೆಯಾಗಿದೆ.

Leave a Comment

Your email address will not be published. Required fields are marked *