Ad Widget .

ಬೆಳ್ಳಾರೆ: ಡಾ. ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜುನ ಸಮಾಜ ಕಾರ್ಯ ವಿಭಾಗದ ವತಿಯಿಂದ ಗ್ರಾಮೀಣ ಸಮುದಾಯ ಶಿಬಿರ

ಸಮಗ್ರ ನ್ಯೂಸ್: ಡಾ. ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ, ಪೆರುವಾಜೆ ಇಲ್ಲಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಗ್ರಾಮೀಣ ಸಮುದಾಯ ಶಿಬಿರವನ್ನು ಮೇ 23ರಿಂದ 27ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಊರುಕೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.

Ad Widget . Ad Widget .

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಊರುಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಕಾಶ್ ಶಾನುಭಾಗ್ ಇವರು ‘ವಿದ್ಯಾರ್ಥಿ ಜೀವನದಲ್ಲಿ ಗ್ರಾಮೀಣ ಅಧ್ಯಯನ ಶಿಬಿರವು ಒಂದು ಗ್ರಾಮದ ಸಂಪ್ರದಾಯ, ಆಚಾರ ವಿಚಾರಗಳನ್ನು ಸ್ವಾಂಗೀಕರಣ ಮಾಡಲು ಸಹಕಾರಿಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಎಲ್ಲಾ ಸೌಕರ್ಯಗಳಿಗೆ ಹೊಂದಿಕೊಂಡು ಬಾಳುವುದರ ಜೊತೆಗೆ ಸವ೯ತೋಮುಖ ಬೆಳವಣಿಗೆ ಉಂಟಾಗುತ್ತದೆ’ಎಂದರು. ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದ ಸ್ನಾತಕೋತ್ತರ ಸಮಾಜ ಕಾಯ೯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅಚ೯ನಾ, ವಿದ್ಯಾರ್ಥಿಗಳಿಗೆ ಶಿಬಿರದ ಉದ್ದೇಶ ಹಾಗೂ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.

Ad Widget . Ad Widget .

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗಂಗಾಧರ ಪಟಗಾರ, ಎಸ್.ಡಿ.ಎಂ.ಸಿ. ಅಧ್ಯಕ್ಷರು. ಸ. ಹಿ. ಪ್ರಾ. ಶಾಲೆ ಊರುಕೇರಿ, ಗಂಗಾ ಪಟಗಾರ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಜಿ. ಎಸ್. ಭಟ್, ಸದಸ್ಯರು ಗ್ರಾಮ ಪಂಚಾಯತ್ ಊರುಕೇರಿ, ಹನುಮಂತ ಗಣಪಯ್ಯ ಪಟಗಾರ, ಊರಮುಖಂಡರು ತಲಗೋಡು. ಶೈಲಜಾ ಆಚಾರಿ, ಮುಖ್ಯೋಪಾಧ್ಯಾಯಿನಿ, ಸ.ಹಿ.ಪ್ರಾ.ಶಾಲೆ ಊರುಕೇರಿ, ಸಂಜೀವ ಮಾದೇವ ಪಟಗಾರ, ಅಧ್ಯಕ್ಷರು ಸ್ವಯಂ ಭೂವಿನಾಯಕ ಮಿತ್ರ ಮಂಡಳಿ ತಲಗೋಡು, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಗ್ರಾಮೀಣ ಸಮೀಕ್ಷೆಯ ಮೂಲಕ ಗ್ರಾಮದ ಹಾಲಕ್ಕಿ ಸಮುದಾಯದ ಜೀವನ ಶೈಲಿ, ವಿಶೇಷ ಆಚರಣೆಗಳು, ಸಂಪ್ರದಾಯಗಳ ಬಗ್ಗೆ ವಿವರವಾಗಿ ಮಾಹಿತಿ ಪಡೆದರು.
ಶಿಬಿರದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದು, ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಸಮಾರೋಪ ಸಮಾರಂಭ ಕಾರ್ಯಕ್ರಮವು ಮೇ. 26ರಂದು ನಡೆಯಿತು. ಕಾರ್ಯಕ್ರಮವನ್ನು ಕು.ಪ್ರಜ್ಞಾ ಇವರು ಸ್ವಾಗತಿಸಿದರು. ಕು. ಧನ್ಯಶ್ರೀ ಬಿ. ಎಸ್. ನಿರೂಪಿಸಿದರು.

Leave a Comment

Your email address will not be published. Required fields are marked *