ಸಮಗ್ರ ನ್ಯೂಸ್: ಸ್ಪೀಕರ್ ಯು.ಟಿ ಖಾದರ್ ಅವರು ಹೇಳಿದ್ದಾರೆ ಎನ್ನಲಾದ ಪೇಪರ್ ಕಟ್ಟಿಂಗ್ ಒಂದು ಭಾರಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದ ಖಾದರ್ ಇದೊಂದು ನಕಲಿ ಸೃಷ್ಟಿ ಎಂದಿದ್ದು ಕೋಮು ದ್ವೇಷ ಹರಡಲು ಕುಮ್ಮಕ್ಕು ನೀಡುವ ಶಕ್ತಿಗಳ ವಿರುದ್ಧ ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ.
ಕಾಂಗ್ರೇಸ್ ನ ಕಾನೂನು ಘಟಕದ ನಂಬರ್ ಗೆ 9343346439 ಗೆ ಈ ನಕಲಿ ಪೇಪರ್ ಕಟ್ಟಿಂಗ್ ಶೇರ್ ಮಾಡುವವರ ಫೋನ್ ನಂಬರ್ ಸಹಿತ ಸ್ಕ್ರೀನ್ ಶಾಟ್ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಕೋಮು ಪ್ರಚೋದನೆಗೆ ಗಂಭೀರ ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ.
ಪೇಪರ್ ಕಟ್ಟಿಂಗ್ ನಲ್ಲಿ ಏನಿದೆ?…
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಅನುದಾನ ತಸ್ತೀಕ್ ರೂಪದಲ್ಲಿ ಮಸೀದಿಗಳಿಗೆ ಹೋಗುವುದನ್ನು ತಡೆದ ಬಿಜೆಪಿ ಸರ್ಕಾರದ ಕ್ರಮಕ್ಕೆ ಶಾಸಕ ಮತ್ತು ಮಾಜಿ ಮಂತ್ರಿ ಯು.ಟಿ.ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಇಲ್ಲಿ ಶುಕ್ರ ವಾರ ಮಾತನಾಡಿದ ಅವರು, ಜನರನ್ನು ಧರ್ಮದ ಹೆಸರಿನ ಮೇಲೆ ವಿಭಜಿಸುವ ಸರ್ಕಾರದ ಹುನ್ನಾರ ಇದಾಗಿದೆ. ಮುಜರಾಯಿ ಇಲಾಖೆ ಅನುದಾನ ಮಸೀದಿಗಳಿಗೆ ಹೋಗುವುದನ್ನು ತಡೆದಿ ರುವ ಕುರಿತಾದ ಗೊಂದಲ ನಿವಾರಿಸುವಂತೆ ಒತ್ತಾಯಿಸಿದರು. ಮುಜರಾಯಿ ಇಲಾಖೆ ಸ್ವಾಮ್ಯಕ್ಕೆ ಒಳಪಟ್ಟ ಮಂದಿರದ ಹುಂಡಿಯಲ್ಲಿನ ಹಣವನ್ನು ಆಯಾ ಮಂದಿರಕ್ಕಾಗಿ ಬಳಸಿಕೊಳ್ಳತಕ್ಕದ್ದು ಎಂದು ನಿಯಮವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕ್ರಮ ಅಸಮಂಜಸದಿಂದ ಕೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ರಹೀಮ್ ಖಾನ್ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು ಎಂಬ ಪೇಪರ್ ಕಟ್ಟಿಂಗ್ ಹರಿದಾಡುತ್ತಿದೆ.
ಆದರೆ ಇಂತಹ ಹೇಳಿಕೆ ಎಲ್ಲಿಯೂ ನೀಡಿಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಸ್ಪಷ್ಟ ಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಅರಿತ ಕಾಂಗ್ರೇಸ್ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿದೆ.
ನೀವಿರುವ ವಾಟ್ಸಾಪ್ ನಲ್ಲಿ ಈ ಪೇಪರ್ ಕಟ್ಟಿಂಗ್ ಬಂದರೆ ಅವರ ಫೋನ್ ನಂಬರ್ ಕಾಣುವಂತೆ screen shot ತೆಗೆದು 9343346439 ನ ವಾಟ್ಸಾಪ್ ಗೆ ಕಳುಹಿಸಂತೆ ಕಾಂಗ್ರೇಸ್ ನ ಕಾನೂನು ಘಟಕ ಮನವಿ ಮಾಡಿದೆ. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.