Ad Widget .

ಮಲಗಿದ್ದ ದಂಪತಿಗೆ ಕಚ್ಚಿದ ನಾಗರ| ಪತಿ ಸಾವು; ಜೀವನ್ಮರಣ ಸ್ಥಿತಿಯಲ್ಲಿ ಪತ್ನಿ

ಸಮಗ್ರ ನ್ಯೂಸ್: ಮಲಗಿದ್ದ ವೇಳೆಯಲ್ಲಿ ದಂಪತಿಗೆ ನಾಗರಹಾವು ಕಚ್ಚಿದ್ದು, ಪತಿ ಮೃತಪಟ್ಟು ಪತ್ನಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ. ಇಲ್ಲಿನ ಸಾಣೆಕೊಪ್ಪ ಮೂಲದ ಸಿದ್ದಪ್ಪ(35) ಮೃತಪಟ್ಟ ದುರ್ದೈವಿ. ಈತನ ಪತ್ನಿ ನಾಗವ್ವ(28) ಸ್ಥಿತಿ ಗಂಭೀರವಾಗಿದೆ.

Ad Widget . Ad Widget .

ಬೆಳಗಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಭಾನುವಾರ ಬೆಳಗಿನ ಜಾವ ಘಟನೆ ನಡೆದಿದೆ. ವಡಗಾವಿಯ ಕಟ್ಟಡ ಕಾಮಗಾರಿಯೊಂದರ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಅವರು ಪತ್ನಿ, ಮೂವರು ಮಕ್ಕಳೊಂದಿಗೆ ಸಮೀಪದ ಶೆಡ್ ನಲ್ಲಿ ವಾಸವಾಗಿದ್ದರು. ಅವರು ಮಲಗಿದ್ದ ವೇಳೆಯಲ್ಲಿ ಹಾವು ಕಚ್ಚಿದ್ದು, ವಿಷವೇರಿದ್ದರಿಂದ ಸಿದ್ದಪ್ಪ ಮತ್ತು ನಾಗವ್ವ ಒದ್ದಾಟ ನಡೆಸಿದ್ದಾರೆ. ಅವರು ಒದ್ದಾಡುವುದನ್ನು ಕಂಡು ಎಚ್ಚರವಾದ ಮಕ್ಕಳು ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾರೆ.

Ad Widget . Ad Widget .

ಹಾವು ಕಚ್ಚಿರುವುದು ಹೊತ್ತಾಗಿ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಿದ್ದಪ್ಪ ಹಾವು ಕಡಿತಕ್ಕೆ ಒಳಗಾಗಿ ಮೃತಪಟ್ಟಿದ್ದು, ನಾಗವ್ವ ಸ್ಥಿತಿ ಗಂಭೀರವಾಗಿದೆ.

Leave a Comment

Your email address will not be published. Required fields are marked *