Ad Widget .

ಸ್ಯಾಂಡಲ್ ವುಡ್ ಖಳನಟ ಕಜಾನ್ ಖಾನ್ ಹೃದಯಾಘಾತದಿಂದ ನಿಧನ

ಸಮಗ್ರ ನ್ಯೂಸ್: ಹಬ್ಬ, ನಾಗದೇವತೆ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ್ದ ಕಜಾನ್​ ಖಾನ್​ ಅವರು ಹೃದಯಾಘಾತದಿಂದ ಕೊಳೆಯುಸಿರೆಳೆದಿದ್ದಾರೆ.

Ad Widget . Ad Widget .

ಮಲೆಯಾಳಂ‌ ಮೂಲದ ​ಕಜಾನ್​ ಖಾನ್​ ಅವರು ಪ್ರಧಾನವಾಗಿ ಖಳನಟನ ಪಾತ್ರಗಳಲ್ಲೇ ನಟಿಸುತ್ತಿದ್ದರು. 1993 ರಲ್ಲಿ ಮೋಹನ್ ಲಾಲ್ ಅವರ ‘ಗಂಧರ್ವಂ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಮಲಯಾಳಂ ನಟ ದಿಲೀಪ್ ಅಭಿನಯದ ‘ಸಿಐಡಿ ಮೂಸಾ’ ಚಿತ್ರದಲ್ಲಿನ ವಿಲನ್​ ಪಾತ್ರಕ್ಕಾಗಿ ಕಜನ್ ಖಾನ್ ಬಹಳ ಮೆಚ್ಚುಗೆಯನ್ನು ಪಡೆದರು.

Ad Widget . Ad Widget .

ಕಜನ್ ಖಾನ್ ಅವರು ‘ಗಂಧರ್ವಂ,’ ‘ಸಿಐಡಿ ಮೂಸ,’ ‘ದಿ ಕಿಂಗ್,’ ‘ವರ್ಣಪಕಿಟ್ಟು,’ ‘ಡ್ರೀಮ್ಸ್,’ ‘ದಿ ಡಾನ್,’ ‘ಮಾಯಾಮೋಹಿನಿ,’ ‘ರಾಜಾಧಿರಾಜ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಕನ್ನಡದಲ್ಲಿ ಹಬ್ಬ, ನಾಗದೇವತೆ ಮತ್ತು ಚೆಲುವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಕಜಾನ್​ ಖಾನ್​ ಅವರು ಆ ಕಾಲದಲ್ಲಿಯೇ ದಕ್ಷಿಣ ಭಾರತದ ಹ್ಯಾಂಡ್​ಸಮ್​ ಖಳನಟ ಎಂಬ ಹೆಸರು ಪಡೆದುಕೊಂಡಿದ್ದರು. ಕಜಾನ್ ಖಾನ್ ಅವರ ಹಠಾತ್ ನಿಧನವು ಚಿತ್ರರಂಗದ ಬಂಧುಗಳು ಮತ್ತು ಅವರ ಅಭಿಮಾನಿಗಳಲ್ಲಿ ಆಘಾತ ಉಂಟುಮಾಡಿದೆ. ನೆಚ್ಚಿನ ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *