ಸಮಗ್ರ ನ್ಯೂಸ್: ಬೊಜ್ಜು ಕರಗಿಸಲು ಹೋದ ಯುವತಿಯ ಅರೆಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಯುವತಿಯೊಬ್ಬಳು ಕಳೆದ ತಿಂಗಳು ಚಿಕಿತ್ಸೆಗೆಂದು ಶೆಟ್ಟೀಸ್ ಕ್ಲೀನಿಕ್ ಗೆ ತೆರಳಿದ್ದಾಗ ಚೆಕಪ್ ಮಾಡಿಸಲು ಪರೀಕ್ಷಾ ಕೊಠಡಿಯಲ್ಲಿ ಡಾ.ಶೆಟ್ಟಿ ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಪರೀಕ್ಷೆ ಮಾಡಿದ್ದಾರೆ.
ಇದಕ್ಕೂ ಮೊದಲು ಮಹಿಳಾ ಸಿಬ್ಬಂದಿ ಚೆಕಪ್ ಮಾಡಲು ಮೈ ಮೇಲಿದ್ದ ಬಟ್ಟೆ ತೆಗೆಯಲು ತಿಳಿಸಿದ್ದಾರೆ. ಅದೇ ರೀತಿ ಯುವತಿ ಬಟ್ಟೆ ತೆಗೆದಿದ್ದು ಒಳ ಉಡುಪಿನಲ್ಲಿ ಪರೀಕ್ಷೆ ಮಾಡಿಸಿದ್ದಾಳೆ. ಆದರೆ ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಯುವತಿಯ ಸಂಪೂರ್ಣ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತಕ್ಷಣ ಯುವತಿ ತನ್ನ ಅಣ್ಣನಿಂದ ಶೆಟ್ಟೀಸ್ ಕ್ಲೀನಿಕ್ಗೆ ಕರೆ ಮಾಡಿಸಿದ್ದಳು. ಕರೆ ಮಾಡಿದ್ದ ಅಣ್ಣ ಸಿಸಿಟಿವಿ ವೀಡಿಯೋ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಶೆಟ್ಟೀಸ್ ಕ್ಲೀನಿಕ್ ವೀಡಿಯೋ ಡಿಲೀಟ್ ಮಾಡಲು ನಿರಾಕರಿಸಿದೆ. ಅಲ್ಲದೆ ಸಿಸಿಟಿವಿ ಹಾಕಲು ನಮಗೆ ಸರ್ಕಾರದ ಆದೇಶವಿದೆ ಎಂದು ಸಬೂಬು ಹೇಳಿದ್ದಾರಂತೆ.
ಸದ್ಯ ಖಾಸಗಿತನಕ್ಕೆ ಧಕ್ಕೆ ಉಂಟುಮಾಡಿದ ಸಂಬಂಧ ಯುವತಿ ದೂರು ನೀಡಿದ್ದಾಳೆ.
ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ರಾಜಾಜಿನಗರದ ಶೆಟ್ಟೀಸ್ ಕ್ಲಿನಿಕ್ ಮೇಲೆ ಎಫ್ಐಆರ್ ದಾಖಲಾಗಿದೆ.