ಸಮಗ್ರ ನ್ಯೂಸ್: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು (ಕೆಸಿಇಟಿ) ಜೂನ್ 12 ರಂದು ಘೋಷಿಸಲು ಯೋಜಿಸಿತ್ತು. ಆದರೆ ಇದೀಗ ಜೂನ್ 14 ರಂದು ರಿಸಲ್ಟ್ ಹೊರಬೀಳಲಿದೆ ಎಂದು ಕೆಇಎ ಮೂಲವು ಮಾಧ್ಯಮಗಳಿಗೆ ತಿಳಿಸಿದೆ.
“ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಅಂದರೆ ಜೂನ್ 12 ರಂದು ಬಿಡುಗಡೆ ಮಾಡುವುದಾಗಿ ನಿಗದಿಪಡಿಸಲಾಗಿತ್ತು. ಆದರೆ ಕೆಲವು ಆಂತರಿಕ ತಪಾಸಣೆಗಳ ಕಾರಣ ಫಲಿತಾಂಶವನ್ನು ಜೂನ್ 14 ರಂದು ಪ್ರಕಟಿಸಲಾಗುವುದು” ಎಂದು ಕೆಇಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 20 ಮತ್ತು 22 ರಂದು ನಡೆದ ಕರ್ನಾಟಕ ಸಿಇಟಿಯಲ್ಲಿ ಈ ಬಾರಿ ಒಟ್ಟು 2.60 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರೆ, 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 1.4 ಲಕ್ಷ ಹುಡುಗಿಯರು ಮತ್ತು 1.21 ಲಕ್ಷ ಹುಡುಗರು ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದಾರೆ. ಕೆಸಿಇಟಿಯನ್ನು 592 ಕೇಂದ್ರಗಳಲ್ಲಿ ನಡೆಸಲಾಗಿದ್ದು, ಅದರಲ್ಲಿ 121 ಕೇಂದ್ರಗಳು ಬೆಂಗಳೂರಿನಲ್ಲಿವೆ.