Ad Widget .

ನಾನು ಪಿಯುಸಿ ಫೇಲ್ ಅಲ್ಲ, ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಓದಿದ್ದೇನೆ| ಸಚಿವ ಪ್ರಿಯಾಂಕ ಖರ್ಗೆ ಸ್ಪಷ್ಟನೆ

ಸಮಗ್ರ ನ್ಯೂಸ್: ನಾನು ಪಿಯುಸಿ ಫೇಲ್‌ ಅಲ್ಲ, ನ್ಯಾಷನಲ್‌ ಲಾ ಸ್ಕೂಲ್‌ನಲ್ಲಿ ಓದಿದ್ದೇನೆ. ಪಾಸ್‌ ಕೂಡ ಆಗಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಈ ಮೂಲಕ ಪಿಯುಸಿ ಫೇಲ್‌ ಆದ ಪ್ರಿಯಾಂಕ್‌ ಖರ್ಗೆ ಎಂಜಿನಿಯರ್‌ ಚಕ್ರವರ್ತಿ ಸೂಲಿಬೆಲೆ ಅವರ ವಿದ್ಯಾರ್ಹತೆ ಕೇಳುತ್ತಿದ್ದಾರೆ ಎಂಬ ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Ad Widget . Ad Widget .

ಚಕ್ರವರ್ತಿ ಸೂಲಿಬೆಲೆ ವಿದ್ಯಾರ್ಹತೆ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪ್ರಿಯಾಂಕ್ ಖರ್ಗೆ ಓದಿರುವುದು ಪಿಯುಸಿ ಮಾತ್ರ ಎಂದು ಹೇಳಿದೆ. ನಂತರ ಹಲವು ಬಿಜೆಪಿ ಬೆಂಬಲಿಗರು, ಬರೀ ಪಿಯುಸಿ ಓದಿರುವ ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರು.

Ad Widget . Ad Widget .

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕ್ ಖರ್ಗೆ, ನಾನು ಯಾವ ವಿಚಾರವನ್ನು ಮುಚ್ಚಿಟ್ಟಿಲ್ಲ, ನನ್ನ ವಿದ್ಯಾರ್ಹತೆಯ ಬಗ್ಗೆ ಮಾಹಿತಿ ಬೇಕು ಎಂದಾದರೆ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಿಂದ ತಿಳಿದುಕೊಳ್ಳಲಿ. ಪ್ರಧಾನಿ ಮೋದಿ ವಿದ್ಯಾರ್ಹತೆ ತಿಳಿದುಕೊಳ್ಳಲು ಮುಂದಾದವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿರುಗೇಟು ಕೊಟ್ಟಿದ್ದರು.

ಚುನಾವಣಾ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಪ್ರಿಯಾಂಕ್ ಖರ್ಗೆ ಅವರು ಪ್ರಥಮ ಪಿಯುಸಿ ಓದಿದ್ದಾರೆ. 10ನೇ ತರಗತಿ ಪಾಸಾಗಿದ್ದು, 1996ರಲ್ಲಿ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದಿರುವುದಾಗಿ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅದಾದ ನಂತರ 1999 ರಲ್ಲಿ ಕಂಪ್ಯೂಟರ್ ಆರ್ಟ್ಸ್ ಮತ್ತು ಅನಿಮೇಷನ್‌ನಲ್ಲಿ ವೃತ್ತಿಪರ ಪ್ರಮಾಣಪತ್ರ ಪಡೆದುಕೊಂಡಿದ್ದೇನೆ ಎಂದು ನಮೂದಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ ನಾನು ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಓದಿದ್ದು, ಪಾಸಾಗಿದ್ದೇನೆ, ಬೇಕಿದ್ದರೆ ನ್ಯಾಷನಲ್ ಲಾ ಸ್ಕೂಲ್‌ಗೆ ಹೋಗಿ ನೋಡಲು ಹೇಳಿ ಎಂದು ಹೇಳಿದ್ದಾರೆ. ಆದರೆ ಚುನಾವಣಾ ಅಫಿಡವಿಟ್‌ನಲ್ಲಿ ಅವರು ಈ ಬಗ್ಗೆ ವಿವರ ನೀಡಿಲ್ಲ.

1 thought on “ನಾನು ಪಿಯುಸಿ ಫೇಲ್ ಅಲ್ಲ, ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಓದಿದ್ದೇನೆ| ಸಚಿವ ಪ್ರಿಯಾಂಕ ಖರ್ಗೆ ಸ್ಪಷ್ಟನೆ”

  1. Edaralle gottagutte, he doesn’t know which one is higher. It clearly indicates, he was not completed even first PUC. He was studied in School means maximum 10th only

Leave a Comment

Your email address will not be published. Required fields are marked *