Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಆಧಾರದ ಮೇಲೆ ಜೂನ್‌ 11ರಿಂದ ಜೂನ್ 18ರವರೆಗಿನ ವಾರ ಭವಿಷ್ಯ ನೋಡುವುದಾದರೆ ಈ ವಾರ ಕೆಲವೊಂದು ರಾಶಿಯವರಿಗೆ ಸೂಪರ್ ಆಗಿದೆ, ಇನ್ನು ಕೆಲವು ರಾಶಿಯವರು ಸ್ವಲ್ಪ ಮುನ್ನೆಚ್ಚರಿಕೆವಹಿಸಿ. ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ:

Ad Widget . Ad Widget .

ಮೇಷ: ಜೂನ್ ತಿಂಗಳ ಮೂರನೇ ವಾರವು ಗ್ರಹಗತಿಗಳು ಹೆಚ್ಚು ಬದಲಾಗುವುದಿಲ್ಲ. ರಾಶ್ಯಾಧಿಪತಿ ಕುಜನು ಚತುರ್ಥದಲ್ಲಿ ಇದ್ದಾನೆ. ಜೊತೆಗೆ ಶುಕ್ರನ ಯೋಗವೂ ಇದೆ. ಮನೆಯಲ್ಲಿ ಸ್ವಲ್ಪ ನೆಮ್ಮದಿಯು ಇರಲಿದೆ. ಕುಜನು ನೀಚಸ್ಥಾನಕ್ಕೆ ಹೋಗಿದ್ದರಿಂದ ಸ್ವಲ್ಪ ಭೂಮಿಯ ಹಿನ್ನಡೆಯಾಗಲಿದೆ. ಮನೆಯಲ್ಲಿ ಆಸ್ತಿಯ ವಿಚಾರವನ್ನು ಮಾತನಾಡಿದರೂ ಯಾವ ಪ್ರಯೋಜನವೂ ಆಗದು. ಬುಧ ಹಾಗೂ ಸೂರ್ಯರು ದ್ವಿತೀಯದಲ್ಲಿ ಇದ್ದುದರಿಂದ ತಂದೆ ಹಾಗೂ ಸಹೋದರರಿಂದ ಶುಭವನ್ನು ನೀವು ನಿರೀಕ್ಷಿಸಬಹುದು. ದಶಮಾಧಿಪತಿಯು ಏಕಾದಶದಲ್ಲಿದ್ದು ಸ್ಥಾನಮಾನವನ್ನೂ ಅಧಿಕಾರದಿಂದ ಸಿಗಬೇಕಾದ ಲಾಭವನ್ನು ಕೊಡುವನು.

Ad Widget . Ad Widget .

ವೃಷಭ: ಈ ತಿಂಗಳ ಮೂರನೇ ವಾರವು ನಿಮಗೆ ಮಿಶ್ರಫಲವು ದೊರೆಯುವ ವಾರವಾಗಿದೆ. ನಿಮ್ಮ ಮನೆಯಲ್ಲಿ ಬುಧ ಹಾಗೂ ಸೂರ್ಯರಿದ್ದು ದೇಹಾಲಸ್ಯವನ್ನು ಅವರು ದೂರಮಾಡುವರು. ಚುರುಕಿನಿಂದ ನೀವು ನಿಮ್ಮ ಕೆಲಸವನ್ನು ಮಾಡಿ ಮುಗಿಸುವಿರಿ. ವಾರದ ಮಧ್ಯದಲ್ಲಿ ಸೂರ್ಯನು ದ್ವಿತೀಯಕ್ಕೆ ಬರಲಿದ್ದು ತಂದೆಯಿಂದ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಕುಜ ಹಾಗೂ ಶುಕ್ರರು ತೃತೀಯದಲ್ಲಿ ಇರುವರು. ಸಹೋದರ ಸಹಕಾರವು ಸ್ವಲ್ಪಮಟ್ಟಿಗೆ ಸಿಗಬಹುದು. ಪಂಚಮಾಧಿಪತಿಯು ನಿಮ್ಮ ಮನೆಯಲ್ಲಿಯೇ ಇರಲಿದ್ದಾನೆ. ಮಕ್ಕಳಿಂದ ಸುಖವು ಸಿಗಲಿದೆ.

ಮಿಥುನ: ಮೂರನೇ ವಾರದಲ್ಲಿ ನಿಮಗೆ ಹೆಚ್ಚು ಅನುಕೂಲಕರವಾದ ಸನ್ನಿವೇಶಗಳು ಎದುರಾಗಬಹುದು. ನಿಮ್ಮ ಮನೆಗೆ ದ್ವಾದಶದಲ್ಲಿರುವ ಸೂರ್ಯನು ಬರುವನು. ತಂದೆಯಿಂದ ಹಣವನ್ನು ಖರ್ಚುನ್ನು ಮಾಡಿಸಲಿರುವಿರಿ. ದ್ವಿತೀಯದಲ್ಲಿ ಕುಜ ಹಾಗೂ ಶುಕ್ರರಿದ್ದು ವಾಹನ ಖರೀದಿಯನ್ನು ನೀವು ಮಾಡಲಿರುವಿರಿ. ಸಪ್ತಮಾಧಿಪತಿಯು ಏಕಾದಶದಲ್ಲಿದ್ದು ವಿವಾಹ ಕಾರ್ಯವು ಶೀಘ್ರವಾಗಿ ನೆರವೇರಬಹುದು. ಸಹೋದರನ ನಿಮಿತ್ತ ಹಣವನ್ನು ನೀವು ನೀಡಬೇಕಾಗಬಹುದು. ಪಂಚಮಾಧಿಪತಿಯು ನೀಚನಾಗಿ ದ್ವಿತೀಯದಲ್ಲಿ ಇರುವುದರಿಂದ ಮಕ್ಕಳಿಂದ ಹೆಚ್ಚು ಖರ್ಚಾಗಬಹುದು. ಸುಬ್ರಹ್ಮಣ್ಯನ ಹಾಗೂ ಮಹಾವಿಷ್ಣುವಿನ ಆರಾಧನೆಯನ್ನು ಮಾಡಿ.

ಕಟಕ: ಈ ವಾರವು ನಿಮ್ಮದೇ ಮನೆಯಲ್ಲಿ ಕುಜ ಮತ್ತು ಶುಕ್ರರಿದ್ದುದರಿಂದ ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಕೇತುವು ಚತುರ್ಥದಲ್ಲಿದ್ದಾನೆ. ಬಂಧುಗಳಿಂದ ಕಿರಿಕಿರಿಯಾಗಬಹುದು. ಸಪ್ತಮಾಧಿಪತಿಯು ಅಷ್ಟಮದಲ್ಲಿದ್ದು ನಿಮಗೆ ಪತಿಯಿಂದ ಅಥವಾ ಪತ್ನಿಯಿಂದ ಏನಾದರೂ ಮಾತುಗಳು ಬರಬಹುದು. ಆಲಸ್ಯವನ್ನು ಹೆಚ್ಚು ತೋರಿಸುವಿರಿ. ದಶಮದಲ್ಲಿ ಗುರು ಹಾಗೂ ರಾಹುವು ಇರುವುದರಿಂದ ನಿಮಗೆ ವೃತ್ತಿಯಲ್ಲಿ ಸಣ್ಣ ವ್ಯತ್ಯಾಸಗಳು ಆಗಬಹುದು. ಏಕಾದಶದಲ್ಲಿರುವ ಬುಧನು ನಿಮಗೆ ಸಮ್ಮಾನಗಳನ್ನು, ಗೌರವಗಳನ್ನು ತಂದುಕೊಡುವನು.

ಸಿಂಹ: ಜೂನ್ ತಿಂಗಳ ಮೂರನೇ ವಾರವು ಮಿಶ್ರದಾಯಕವಾಗಿದೆ. ಸಪ್ತಮಾಧಿಪತಿಯು ಸಪ್ತಮದಲ್ಲಿಯೇ ಇರುವುದರಿಂದ ನಿಮಗೆ ಹೆಚ್ಚಿನ ಅನುಕೂಲವಿದೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಕಂಡರೂ ಅದು ಸ್ವಲ್ಪ ಕಾಲ ಮಾತ್ರ ಇರುತ್ತದೆ. ಅಷ್ಟಮಾಧಿಪತಿಯು ನವಮದಲ್ಲಿ ಇರುವುದರಿಂದ ಪೂರ್ವಪುಣ್ಯವು ಹಾಗೂ ಧಾರ್ಮಿಕ ಕಾರ್ಯಗಳೂ ಅಲ್ಪಪ್ರಮಾಣದಲ್ಲಿ ನಡೆಯುವುವು. ಏಕಾದಶಾಧಿಪತಿಯು ದಶಮದಲ್ಲಿ ಇರುವುದರಿಂದ ವೃತ್ತಿಯಲ್ಲಿ ಹೆಚ್ಚಿನ ಸ್ಥಾನವು ಸಿಗಲಿದೆ. ಈ ವಾರ ಚಂದ್ರ ಬುಧರ ಸಂಯೋಗವಾಗುವುದರಿಂದ ನಿಮ್ಮ ಹಾಗೂ ತಾಯಿಯ ನಡುವೆ ಸಕಾರಾತ್ಮಕವಾದ ಕಲಹಗಳು ನಡೆಯಬಹುದು.

ಕನ್ಯಾ: ಈ ವಾರವು ನಿಮಗೆ ಸಾಧಾರಣವಾಗಿ ಇರಲಿದೆ. ದ್ವಿತೀಯದಲ್ಲಿ ಕೇತು ಇರುವುದರಿಂದ ನಿಮ್ಮ ಮಾತಿಗೆ ಬೆಲೆ ಸಿಗದೇ ಹೋಗಬಹುದು. ಷಷ್ಠದಲ್ಲಿ ಶನಿಯು ಇದ್ದು, ಪಂಚಮಾಧಿಪತಿಯೂ ಆಗಿರುವನು. ಮಕ್ಕಳ ಜೊತೆ ಕಲಹಗಳು ಆಗಬಹುದು. ಮಕ್ಕಳೇ ಶತ್ರುವಿನಂತೆ ಆಗಬಹುದು. ಸಪ್ತಮಾಧಿಪತಿಯು ಅಷ್ಟಮದಲ್ಲಿ ಇರುವುದರಿಂದ ಪತ್ನಿಯಿಂದ ನಿಮಗೆ ಅಪಮಾನವಾಗಬಹುದು. ಮನಸ್ಸೂ ಬಹಳ ಅನ್ಯ ಚಿಂತೆಯಲ್ಲಿ ತೊಡಗಿರುವುದು. ಏಕಾಗ್ರತೆಯ ಕೊರತೆ ಹೆಚ್ಚು ಕಾಣುವುದು. ನವಮಾಧಿಪತಿಯಾದ ಶುಕ್ರನು ಏಕಾದಶದಲ್ಲಿ ಕುಜನ ಜೊತೆಗಿದ್ದು ಅಲ್ಪಶುಭವನ್ನು ಉಂಟುಮಾಡುವನು. ಸ್ತ್ರೀಯರ ಮೇಲೆ ಮೋಹಗೊಳ್ಳುವಂತೆ ಮಾಡುವನು.

ತುಲಾ: ಜೂನ್ ಮೂರನೇ ವಾರವು ನಿಮಗೆ ಶುಭವುಳ್ಳ ವಾರವಾಗಿದೆ. ಪಂಚಮಾಧಿಪತಿಯಾದ ಶನಿಯು ನಿಮಗೆ ತೊಂದರೆಯನ್ನು ಕೊಟ್ಟಾನು. ಆದರೂ ಧೈರ್ಯಗೆಡಬೇಕಾದ ಅವಶ್ಯಕತೆ ಇಲ್ಲ. ಸಪ್ತಮದ ಗುರುವು ನಿಮ್ಮನ್ನು ಕಾಪಾಡುವನು. ಅಷ್ಟಮದಲ್ಲಿರುವ ಬುಧನು ನಿಮಗೆ ನೋವನ್ನು ಉಂಟುಮಾಡಬಹುದು. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ. ವಾರದ ಮಧ್ಯದಲ್ಲಿ ಸೂರ್ಯನು ನವಮಕ್ಕೆ ಬರಲಿದ್ದು ರಾಜಮಾನ್ಯತೆ ಅಥವಾ ರಾಜಸಮಾನವಾದ ಮಾನ್ಯತೆ ಸಿಗಬಹುದು. ತಂತ್ರಜ್ಞರಿಗೆ ಅಧಿಕಲಾಭ ಹಾಗೂ ಅಧಿಕಾರವೂ ಸಿಗುವ ಸಾಧ್ಯತೆ ಇದೆ.

ವೃಶ್ಚಿಕ: ಈ ವಾರವು ನಿಮಗೆ ಮಿಶ್ರಫಲವನ್ನು ನೀಡುವ ವಾರವಾಗಿದೆ. ಚತುರ್ಥದಲ್ಲಿ ಇರುವ ಶನಿಯು ನಿಮಗೆ ಬಂಧುಗಳಿಂದ ದೂರವಿರುವಂತೆ ಮಾಡುವನು. ಷಷ್ಠದಲ್ಲಿರುವ ಗುರು ಹಾಗೂ ರಾಹುಗಳು ನಿಮಗೆ ಹೆಚ್ಚು ಅನುಕೂಲರರಲ್ಲ. ರಾಹುವು ಸ್ವಲ್ಪಮಟ್ಟಿಗೆ ಶತ್ರುಬಾಧೆಯನ್ನು ಕಡಿಮೆ ಮಾಡಿಸಿಯಾನು. ಗುರುವಿನಿಂದ ನಿಮಗೆ ರೋಗಗಳು ಬರಬಹುದು. ಸಪ್ತಮಾಧಿಪತಿಯು ನವಮದಲ್ಲಿದ್ದು ಪತ್ನಿಯ ಮಾತಿನಿಂದ ಶುಭವಾಗುವುದು. ಕುಜ ಹಾಗೂ ಶುಕ್ರರ ಸಂಯೋಗವು ಅಷ್ಟು ಶುಭಕರವಲ್ಲ. ಭೂಮಿಯ ವ್ಯವಹಾರವು ಅಲ್ಪಲಾಭವನ್ನಷ್ಟೇ ತರಿಸಬಹುದು.

ಧನುಸ್ಸು: ಜೂನ್ ತಿಂಗಳ ಮೂರನೇ ವಾರವು ಅಲ್ಪ ಶುಭವಿರುವ ವಾರವಾಗಿದೆ. ತೃತೀಯದಲ್ಲಿ ಶನಿಯು ನಿಮ್ಮ ಸಾಮರ್ಥ್ಯವನ್ನು ತೋರಿಸಲು ತಡೆಯನ್ನು ಉಂಟುಮಾಡುವನು. ಪಂಚಮಾಧಿಪತಿಯು ಅಷ್ಟಮದಲ್ಲಿರುವುದರಿಂದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಷಷ್ಠಾಧಿಪತಿಯು ಅಷ್ಠಮದಲ್ಲಿರುವುದರಿಂದ ಸ್ತ್ರೀಯರಿಂದ ತೊಂದರೆಗಳು ಬರಬಹುದು. ತಂದೆಯ ಸಹಾಯದಿಂದ ವಿವಾಹ ಸಂಬಂಧವು ಸಿದ್ಧವಾಗಬಹುದು. ಕುಜ ಹಾಗೂ ಶುಕ್ರರು ಅಷ್ಟಮದಲ್ಲಿದ್ದು ನೀವು ವಾಹನದಿಂದ ಬಿದ್ದು ಪೆಟ್ಟುಮಾಡಿಕೊಳ್ಳುವ ಸಾಧ್ಯತೆ ಇದೆ.

ಮಕರ: ಮೂರನೇ ವಾರವು ಸಾಧಾರಣವಾಗಿದೆ. ದ್ವಿತೀಯದಲ್ಲಿಯೇ ಶನಿಯಿದ್ದು ಪೂರ್ವಾರ್ಜಿತ ಸಂಪತ್ತು ನಾಶವಾಗಬಹುದು. ಗುರು ಹಾಗೂ ರಾಹುವಿನ ಸಂಯೋಗವು ಚತುರ್ಥದಲ್ಲಿ ಆದ ಕಾರಣ ಕುಟುಂಬದಲ್ಲಿ, ಬಂಧುಗಳ ಜೊತೆ ಹೆಚ್ಚು ಕಲಹವು ಉಂಟಾಗಬಹುದು. ಮಕ್ಕಳು ಹಾಗೂ ಪತ್ನಿಯಿಂದ ಹೆಚ್ಚು ಮಾನಸಿಕ ಒತ್ತಡವನ್ನು ನೀವು ಅನುಭವಿಸುವ ಸಾಧ್ಯತೆ ಇದೆ. ಸರ್ಕಾರದಲ್ಲಿ ಕೆಲಸವು ಹಾಗೆಯೇ ಉಳಿದುಕೊಳ್ಳಬಹುದು. ಏಕಾದಶಾಧಿಪತಿಯು ಸಪ್ತಮದಲ್ಲಿ ನೀಚಸ್ಥಾನದಲ್ಲಿರುವನು. ಧನವ್ಯಯವು ಅಧಿಕವಾಗಲಿದೆ. ದಶಮದಲ್ಲಿ ಕೇತುವಿದ್ದು ನೀಚಕಾರ್ಯಕ್ಕೆ ನಿಮ್ಮನ್ನು ಪ್ರೇರಿಸುವನು. ಕಾರ್ತಿಕೇಯನ ಸ್ಮರಣೆಯನ್ನು ಅಗತ್ಯವಾಗಿ ಮಾಡಬೇಕಿದೆ.

ಕುಂಭ: ಈ ತಿಂಗಳ ಮೂರನೇ ವಾರವು ಇದಾಗಿರಲಿದ್ದು ಗ್ರಹಗತಿಗಳ ಅಲ್ಪ ಬದಲಾವಣೆಯಿಂದ ಅಲ್ಪ ಲಾಭವನ್ನು ಪಡೆಯಬಹುದಾಗಿದೆ. ನಿಮ್ಮ ಮನೆಯಲ್ಲಿಯೇ ಇರುವ ಶನಿಯು ಅಷ್ಟಾಗಿ ಸೌಖ್ಯವನ್ನು ಕೊಡನು. ಗುರುವು ತೃತೀಯದಲ್ಲಿದ್ದು ನಿಮ್ಮ ಸಾಮರ್ಥ್ಯವನ್ನು ಅಲ್ಪ ಮಾತ್ರ ಪ್ರಕಾಶಗೊಳಿಸುವನು. ಚತುರ್ಥದಿಂದ ಸೂರ್ಯನು ಪಂಚಮಕ್ಕೆ ಹೋಗಲಿದ್ದು ತಂದೆ ಹಾಗೂ ಮಕ್ಕಳಲ್ಲಿ ಕಲಹವನ್ನು ತರಿಸುವನು. ಕುಜ ಹಾಗೂ ಶುಕ್ರರು ಷಷ್ಠದಲ್ಲಿದ್ದು ವಾಹನದಿಂದ ನೋವನ್ನು ಕೊಡಿಸುವನು. ಮಹಿಳೆಯು ನಿಮ್ಮ ಶತ್ರುವಾಗಿ ಇರುವರು. ದೇವಿಯ ಆರಾಧನೆಯು ಶುಭಪ್ರದವಾಗಿದೆ.

ಮೀನ: ಈ ವಾರವು ಮಿಶ್ರಫಲವನ್ನು ನೀವು ಕಾಣುವಿರಿ. ದ್ವಿತೀಯದಲ್ಲಿ ಗುರು ಹಾಗೂ ರಾಹುಗಳು ಇದ್ದು ಪೂರ್ವಾರ್ಜಿತಸಂಪತ್ತನ್ನು ನಷ್ಟಮಾಡಿಸಬಹುದು. ನಿಮ್ಮ ಸಾಹಿತ್ಯಕ್ಷೇತ್ರದಲ್ಲಿನ ಬಲವನ್ನು ನಿಮ್ಮವರು ತಿಳಿದುಕೊಳ್ಳುವರು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ತಂದೆಯ ಮಾತನ್ನು ನೀವು ಪಾಲಿಸುವಿರಿ. ಸಪ್ತಮಾಧಿಪತಿಯು ತೃತೀಯದಲ್ಲಿ ಇರುವನು. ಪತ್ನಿಯ ಬಗ್ಗೆ ನಿಮಗೆ ಇರುವ ಸಂದೇಹಗಳು ಸಂಪೂರ್ಣ ನಾಶವಾಗುವುದು. ಏಕಾದಶಾಧಿಪತಿಯು ದ್ವಾದಶದಲ್ಲಿ ಇರುವುದರಿಂದ ನಿಮಗೆ ಸಂಪತ್ತು ವ್ಯಯಕ್ಕೆ ಸಮವಾಗಿ ಬರುವುದು. ರುದ್ರಾಭಿಷೇಕವನ್ನು ಮಾಡಿಸಿ.

Leave a Comment

Your email address will not be published. Required fields are marked *