Ad Widget .

ಸುಳ್ಯ: ‘ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇಳೆ ಕೈ ನಾಯಕರ “ಸ್ವಶಕ್ತಿ” ಪ್ರದರ್ಶನ| ಮತ್ತೊಮ್ಮೆ ಬೀದಿಗೆ ಬಂದ ಕಾಂಗ್ರೆಸ್ ನ ಒಳಜಗಳ

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಗೆ ಚಾಲನೆ ನೀಡುವ ವೇಳೆ ಸುಳ್ಯ ಕಾಂಗ್ರೆಸ್ ನಲ್ಲಿ ನಾಯಕರ ಸ್ವಶಕ್ತಿ ಪ್ರದರ್ಶನ(!) ನಡೆದಿದೆ. ಈ ಮೂಲಕ ಕಾಂಗ್ರೆಸ್ ನ ನಾಯಕರ ಒಳಜಗಳ ಬೀದಿಗೆ ಬಿದ್ದಿದೆ.

Ad Widget . Ad Widget .

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ‌ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ‘ಶಕ್ತಿ’ಗೆ ಚಾಲನೆ ನೀಡಲಾಗಿದೆ. ಸುಳ್ಯದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ವೇಳೆ ಸ್ವತಃ ಕಾಂಗ್ರೆಸ್ ನಾಯಕರು ಕಿತ್ತಾಟ ನಡೆಸಿರುವುದುಗಾಗಿ ತಿಳಿದುಬಂದಿದೆ.

Ad Widget . Ad Widget .

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಕ್ತಿ ಯೋಜನೆಯ ಚಾಲನಾ ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿ ಹಾಗೂ ಸಚಿವರ ಸಂಪುಟ ಸರಕಾರಕ್ಕೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ನಡುವೆ ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡರು ಆಗಮಿಸುತ್ತಿದ್ದಂತೆ ಕಾರ್ಯಕ್ರಮ ಪ್ರಾರಂಭಿಸಲು ಆರಂಭಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮ ಆರಂಭಿಸಲು ಸಮಯ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಮಧ್ಯೆ ವಾಕ್ಸಮರ ಆರಂಭವಾಯಿತು.

ಈ ವೇಳೆ ಮಧ್ಯೆ ಪ್ರವೇಶಿಸಿದ ಬ್ಲಾಕ್ ಅಧ್ಯಕ್ಷ ಪಿ.ಸಿ ಜಯರಾಮ ಶಾಂತಿಯಿಂದ ಇರುವಂತೆ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಮಾತನಾಡಿ ಇಬ್ಬರು ನಾಯಕರನ್ನು ಸಮಧಾನಪಡಿಸಿದರು. ಒಟ್ಟಾರೆ ಕಾಂಗ್ರೆಸ್ ನಾಯಕರ ಒಳಜಗಳ ಬೀದಿಗೆ ಬಂದಿರುವುದು ವಿಪಕ್ಷಗಳಿಗೆ ಆಹಾರವಾಗಿದೆ.

Leave a Comment

Your email address will not be published. Required fields are marked *