Ad Widget .

ಕರೆಂಟ್ ಬಿಲ್‌ ಹೆಚ್ಚಾಗಲು‌ ನಮ್ಮ ಸರ್ಕಾರ ಕಾರಣವಲ್ಲ – ಗೃಹ ಸಚಿವ ಪರಮೇಶ್ವರ್

ಸಮಗ್ರ ನ್ಯೂಸ್: ನಮ್ಮ ಸರ್ಕಾರ ಕರೆಂಟ್​ ಬಿಲ್​ ಜಾಸ್ತಿ ಮಾಡಿಲ್ಲ. ಹಿಂದಿನ ಸರ್ಕಾರದಲ್ಲಿಯೇ ವಿದ್ಯುತ್​ ದರ ಏರಿಕೆ ಮಾಡಲಾಗಿತ್ತು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಹೇಳಿದ್ದಾರೆ.

Ad Widget . Ad Widget .

ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​ ವಿದ್ಯುತ್​ ಬಿಲ್ ಏರಿಕೆ ಮಾಡಿದೆ ಎಂದು ಕೆಲವರು ಸುಮ್ಮನೆ ಕತೆ ಕಟ್ಟುತ್ತಿದ್ದಾರೆ ಎಂದು ಹೇಳಿದ್ದಾರೆ

Ad Widget . Ad Widget .

ಕರೆಂಟ್​ ಬಿಲ್​ ಜಾಸ್ತಿ ಬರೋಕೆ ನಮ್ಮ ಸರ್ಕಾರ ಕಾರಣವಲ್ಲ. ನೀವು ಯುನಿಟ್​ ಜಾಸ್ತಿ ಬಳಕೆ ಮಾಡಿದ್ದರೆ ನೀವೇ ಬಿಲ್​ ಕಟ್ಟಬೇಕು . ಹಿಂದಿನ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡಿದ್ದು ಅದರ ಬಿಲ್​ ಈಗ ಬಂದಿದೆ ಎಂದು ಡಾ.ಜಿ ಪರಮೇಶ್ವರ್​ ಹೇಳಿದರು .

ಗ್ಯಾರಂಟಿ ಕಾರ್ಡ್​ನಲ್ಲಿದ್ದ ಎಲ್ಲಾ ಯೋಜನೆಗಳನ್ನು ನಾವು ಜಾರಿ ಮಾಡುತ್ತೇವೆ, ಎಲ್ಲಾ ಯೋಜನೆಗಳು ಮುಂದುವರಿಯುತ್ತಿದೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

Leave a Comment

Your email address will not be published. Required fields are marked *