ಸಮಗ್ರ ನ್ಯೂಸ್: ತಾಪಮಾನ ಅಧಿಕವಾದ ಕಾರಣ ಕೋಳಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿವೆ. ಶೆಡ್ ಗಳಲ್ಲಿ ಬಿಸಿ ಗಾಳಿ ಕಾರಣದಿಂದ ಕೋಳಿಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಇದರ ಪರಿಣಾಮ ಮೊಟ್ಟೆ ಉತ್ಪಾದನೆ ಮೇಲೆ ಉಂಟಾಗಿದೆ. ಹೀಗಾಗಿ ಮೊಟ್ಟೆಯ ದರ ಏರಿಕೆಯಾಗಿದೆ.
ಬೇಸಿಗೆಯಲ್ಲಿ ಕೋಳಿಗಳು ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತವೆ. ಹೆಚ್ಚಾಗಿ ನೀರು ಕುಡಿಯುವುದರಿಂದ ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ ಮೊಟ್ಟೆ ಉತ್ಪಾದನೆ ಕುಂಠಿತವಾಗಿದೆ. ಸಾರಿಗೆ ವೆಚ್ಚ ಕೂಡ ದುಬಾರಿಯಾಗಿದ್ದು, ಮೊಟ್ಟೆಯ ದರ 50 ರಿಂದ 60 ಪೈಸೆಯಷ್ಟು ಹೆಚ್ಚಳವಾಗಿದೆ.
ಊರ ಹಬ್ಬ, ಜಾತ್ರೆ, ಮಾಂಸದೂಟ ಹೆಚ್ಚಾಗಿದೆ. ಹೋಟೆಲ್, ಬೇಕರಿಗಳಲ್ಲಿ ಬಳಕೆ, ಮದುವೆ ಬೀಗರೂಟ ಕಾರ್ಯಕ್ರಮಗಳೂ ಹೆಚ್ಚಾಗಿದ್ದು, ಮೊಟ್ಟೆಗೆ ಬೇಡಿಕೆ ಇದೆ. ಸಾರಿಗೆ ವೆಚ್ಚ ದುಬಾರಿಯಾಗಿದ್ದು, ಸಾಗಾಣಿಕೆ ಸಂದರ್ಭದಲ್ಲಿ ಡ್ಯಾಮೇಜ್ ಆಗುತ್ತವೆ. ಕೋಳಿ ಸಾಕಣೆ ಕೂಡ ದುಬಾರಿಯಾಗಿದೆ. ಜೋಳ, ಸೋಯಾ, ಕಡ್ಲೆಕಾಯಿ ಕೇಕ್, ಸೂರ್ಯಕಾಂತಿ ಇಂಡಿ, ಅಕ್ಕಿ ತೌಡು ಬೆಲೆ ಹೆಚ್ಚಾಗಿದ್ದು, ಕೂಲಿ ಕಾರ್ಮಿಕರ ಕೊರತೆ, ವಿದ್ಯುತ್ ಹಾಗೂ ನಿರ್ವಹಣೆ ವೆಚ್ಚ ಕೂಡ ದುಬಾರಿಯಾಗಿರುವುದರಿಂದ ಸಾಕಣೆದಾರರಿಗೆ ಹೊರೆಯಾಗಿದೆ. ಇವೆಲ್ಲಾ ಕಾರಣದಿಂದ ಮೊಟ್ಟೆ ದರ ಏರಿಕೆ ಕಂಡಿದೆ. ಸಗಟು ದರ 5.65 ರೂ., ಚಿಲ್ಲರೆ ದರ 6.50 ರೂಪಾಯಿ. ಇದೆ ರಾಜ್ಯದಲ್ಲಿ ಪ್ರತಿದಿನ 1.60 ಕೋಟಿ ಮೊಟ್ಟೆ ಉತ್ಪಾದನೆ ಆಗುತ್ತಿವೆ. ಉತ್ಪಾದನೆ ಕುಂಠಿತವಾಗಿ, ಬೇಡಿಕೆ ಹೆಚ್ಚಾಗಿರುವುದರಿಂದ ದರ ಏರಿಕೆ ಕಂಡಿದೆ.