Ad Widget .

ಬೆಳ್ತಂಗಡಿ: ಸೇತುವೆ ಅಡಿಯಲ್ಲಿ ಎರಡು ಕಾಣಿಕೆ ಡಬ್ಬಿಗಳು ಪತ್ತೆ..!

ಸಮಗ್ರನ್ಯೂಸ್: ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಬಜಕ್ರೆಸಾಲು ಸೇತುವೆ ಅಡಿಯಲ್ಲಿ ಎರಡು ಕಾಣಿಕೆ ಡಬ್ಬಿಗಳು ಪತ್ತೆಯಾಗಿದೆ.

Ad Widget . Ad Widget .

ಜೂ.10 ರಂದು ಮಧ್ಯಾಹ್ನ ಬಜಕ್ರೆಸಾಲು ಎಂಬಲ್ಲಿ ಸೇತುವೆಯ ಅಡಿ ಭಾಗದಲ್ಲಿ ಸ್ಥಳೀಯ ನಿವಾಸಿ ರಾಜು ಅವರು ಕಲ್ಲಿನ ಮೇಲೆ ಇರುವ ಪ್ಲಾಸ್ಟಿಕ್ ಗೋಣಿಗಳನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಎರಡು ಸ್ಟೀಲ್ ಡಬ್ಬಗಳು ಪತ್ತೆಯಾಗಿವೆ. ಈ ಕುರಿತು ಅವರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆಯವರಿಗೆ ತಿಳಿಸಿದ್ದು, ಅವರು ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ. ಕಳೆದ ರಾತ್ರಿ ಕಾಣಿಕೆ ಡಬ್ಬಿಗಳನ್ನು ಕಳ್ಳತನ ಎಸಗಿ ಗೋಣಿಗಳಲ್ಲಿ ತುಂಬಿಸಿಕೊಂಡು ಬಂದು ಸೇತುವೆ ಅಡಿಯಲ್ಲಿ ಡಬ್ಬಿಯನ್ನು ಒಡೆದು ಹಣ ಕಳವು ಗೈದಿರುವ ಶಂಕೆ ಮೂಡಿ ಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ದೇವಪ್ಪ , ಕ್ರೈಂ ಪಿಸಿಗಳಾದ ಚರಣ್ ರಾಜ್ , ಅಶೋಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಬ್ಬದೊಳಗೆ ಬೀಗ ಮತ್ತು ಕೀ ಪತ್ತೆಯಾಗಿದ್ದು, ತನಿಖೆಗಾಗಿ ಎರಡು ಕಾಣಿಕೆ ಡಬ್ಬಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಣಿಕೆ ಡಬ್ಬಿಗಳು ಎಲ್ಲಿಂದ ಕಳ್ಳತನವಾಗಿದೆ ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *