ಬೆಳ್ತಂಗಡಿ: ಗಾಳಿ-ಮಳೆಯಿಂದಾಗಿ ವಿದ್ಯುತ್ ಕಂಬಗಳಿಗೆ ಹಾನಿ

ಸಮಗ್ರನ್ಯೂಸ್: ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಕಂಬ ಮುರಿದು ಬಿದ್ದ ಘಟನೆ ಸವಣಾಲು ರಸ್ತೆಯ ಪುಲ್ತಡ್ಕ ಎಂಬಲ್ಲಿ ಜೂ.10 ರಂದು ನಡೆದಿದೆ. ಇಂದು ಬೆಳಗ್ಗಿನಿಂದ ತಾಲೂಕಿನ ಹಲವೆಡೆಗಳಲ್ಲಿ ‌ಸುರಿದ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ಸವಣಾಲು ಹೋಗುವ ರಸ್ತೆಯ ಲಾಯಿಲ ಗ್ರಾಮದ ಪುಲ್ತಡ್ಕದಲ್ಲಿ ಬೃಹತ್ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಕಂಬ ಮುರಿದು ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿದೆ.

Ad Widget ... ..

ಈ ಬಗ್ಗೆ ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿ ಕಿಟ್ಟಣ ಸೇರಿದಂತೆ ಇತರರು ವಿದ್ಯುತ್ ತಂತಿಗಳನ್ನು ಹಾಗೂ ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Ad Widget

Leave a Comment

Your email address will not be published. Required fields are marked *