Ad Widget .

ಮರ್ಕಂಜ: ಗಣಿಗಾರಿಕೆ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ತಹಶೀಲ್ದಾರಿಗೆ ಮನವಿ

ಸಮಗ್ರ ನ್ಯೂಸ್:‌ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮ ಮತ್ತು ಇದರಿಂದ ಹಲವು ಜನ ಸಾಮನ್ಯರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನಲೆ ಗಣಿಗಾರಿಕೆ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ತಹಶೀಲ್ದಾರಿಗೆ ಮರ್ಕಂಜ ಗ್ರಾಮಸ್ಥರು ಜೂ.09 ರಂದು ಮನವಿ ಸಲ್ಲಿಸಿದರು.

Ad Widget . Ad Widget .

ಮರ್ಕಂಜ ಪ್ರದೇಶದಲ್ಲಿ ಈಗಾಗಲೇ ಗಣಿ ಇಲಾಖೆಯು ಗಣಿಗಾರಿಕೆಗೆ ಪರವಾನಿಗೆ ನೀಡಿದ್ದು ಈ ಪ್ರದೇಶದ ಆತೀ ಸಮೀಪದಲ್ಲಿ ಸರಕಾರಿ ಶಾಲೆ, ದೇವಸ್ಥಾನ, ಪೋಸ್ಟ್ ಆಫೀಸ್, ಸೊಸೈಟಿ, ಪರಿಶಿಷ್ಟ ಕಾಲೊನಿ, ಜನವಸತಿ, ಮತ್ತು ಸಮೃದ್ಧ ಕೃಷಿ ಪ್ರದೇಶವನ್ನು ಹೊಂದಿದೆ. ಈ ಪರಿಸರವು ಸೂಕ್ಷ್ಮ ಪ್ರದೇಶವಾಗಿದ್ದು, ಇತ್ತೀಚೆಗೆ ಕೊಡಗಿನಲ್ಲಿ ನಡೆದ ಭೂಕುಸಿತದಂತೆ, ಮರ್ಕಂಜದಲ್ಲಿ ಗಣಿಗಾರಿಕೆ ಪ್ರದೇಶದ ಕೂಗಳತೆ ದೂರದಲ್ಲಿ ಎರಡು ಮನೆಗಳು ಕುಸಿದಿದ್ದು, ಧಾರ್ಮಿಕ ಇತಿಹಾಸ ಪ್ರಸಿದ್ಧ ಮಿನುಂಗೂರ ಮಲೆಯಲ್ಲಿ ಭೂಕುಸಿತವಾಗಿರುತ್ತದೆ. ಇದಕ್ಕೆಲ್ಲಾ ಗಣಿಗಾರಿಕೆಯೇ ಕಾರಣವೆಂದು ತಜ್ಞರ ಅಭಿಪ್ರಾಯವಾಗಿರುತ್ತದೆ. ಗಣಿ ಇಲಾಖೆಯಿಂದ ಈ ಪ್ರದೇಶದಲ್ಲಿ ಸ್ಫೋಟಕ್ಕೆ ಮತ್ತು ಕ್ರಸರ್‌ಗೆ ಯಾವುದೇ ರೀತಿಯ ಅನುಮತಿ ಇಲ್ಲದಿದ್ದರೂ ಪ್ರಬಲವಾದ ಸ್ಫೋಟಕಗಳನ್ನು ಬಳಸುತ್ತಿದ್ದು, ಸುಮಾರು 46ಮೀ ವ್ಯಾಪ್ತಿಯಲ್ಲಿ ಭೂಮಿಯು ಕಂಪಿಸುತ್ತದೆ. ಶಾಲೆ, ಕಚೇರಿ, ಮತ್ತು ಮನೆಯ ಗೋಡೆಗಳು ಬಿರುಕು ಬಿಟ್ಟಿದೆ, ಇದರಿಂದ ಅಂರ್ತಜಲ ಬತ್ತಿದ್ದು, ಸುತ್ತಮುತ್ತಲಿನ ಕೆರೆ, ಬಾವಿ ಮತ್ತು ಕೊಳವೆಬಾವಿಗಳು ಬರಡಾಗಿದೆ. ಈ ಸ್ಥಾವರದಿಂದ ಏಳುವ ಧೂಳು ಕೃಷಿಗೆ ಮಾರಕವಾಗಿರುತ್ತದೆ. ಈ ಆಕ್ರಮ ಗಣಿಗಾರಿಕೆಯಿಂದಾಗಿ ಶಾಲೆ ಮುಚ್ಚುವ ಭೀತಿ, ನೀರಿನ ಅಂರ್ತಜಲ ಭೀತಿ, ಸುತ್ತಮುತ್ತಲಿರುವ ಜನಗಳಿಗೆ ವಾಸಿಸಲು ಕಷ್ಟಸಾಧ್ಯವಾದ್ದರಿಂದ ಈಗಾಗಲೇ ತೀವ್ರ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದುದರಿಂದ ಮುಂದೆ ಏನಾದರೂ ಅನಾಹುತ ಸಂಭವಿಸಿದಲ್ಲಿ ಗಣಿ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ನೇರ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸುತ್ತಾ, ಈ ಗಣಿಗಾರಿಕೆ ಸ್ಥಾವರವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ಬೇಡಿಕೊಳ್ಳುತ್ತಿದ್ದೇವೆ. ಎಂದು ತಹಶೀಲ್ದಾರಿಗೆ ಮರ್ಕಂಜ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *