ಸಮಗ್ರ ನ್ಯೂಸ್: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ 5ನೇ ವಾರ್ಡ್ನ ಇಂದಿರಾನಗರದಲ್ಲಿ ನಡೆದಿದೆ.
ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಗಳ ಪುತ್ರಿ ಪ್ರಿಯದರ್ಶಿನಿ ಮೃತಪಟ್ಟ ದುರ್ದೈವಿ. ಆಟವಾಡುತ್ತಿದ್ದಾಗ ಕೈಗೆ ಸಿಕ್ಕಿದ ಮೆಂಥೋಪ್ಲಸ್ನ ಚಿಕ್ಕ ಡಬ್ಬಿಯನ್ನು ಮಗು ನುಂಗಿದೆ. ಇದಾದ ನಂತರ ಮಗುವಿಗೆ ಉಸಿರಾಟ ತೊಂದರೆ ಹೆಚ್ಚಾಗಿದ್ದು ಖಾಸಗಿ ವೈದ್ಯರ ಬಳಿಗೆ ಪೋಷಕರು ಕರೆದುಕೊಂಡು ಹೋಗಿದ್ದಾರೆ.
ಮಗುವನ್ನು ಪರೀಕ್ಷಿಸಿದ ವೈದ್ಯರು, ಮಾರ್ಗ ಮಧ್ಯೆಯೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಈ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಈ ಮಗು ಜನಿಸಿತ್ತು.