ಸಮಗ್ರ ನ್ಯೂಸ್: ದಿನಕ್ಕೆ ಮೂರು ಖರ್ಜೂರವನ್ನು ತಿನ್ನುವುದು ದೇಹದಲ್ಲಿ ಸಾಕಷ್ಟು ಬದಲಾವಣೆ ಉಂಟು ಮಾಡುತ್ತದೆ. ಇದರಲ್ಲಿರುವ ನೈಸರ್ಗಿಕ ಜೀವಸತ್ವಗಳು, ಅಮೈನೋ ಆಮ್ಲಗಳು ಮತ್ತು ಖನಿಜಾಂಶಗಳು ಹೇರಳವಾಗಿದ್ದು, ಇದು ಮೆದುಳಿನ ಕೋಶಗಳ ಆರೋಗ್ಯವನ್ನು ಉತ್ತೇಜಿಸಿ ಸಮರ್ಪಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಮತ್ತು ಪೊಟ್ಯಾಸಿಯಮ್ ಅಂಶಗಳು ನರಮಂಡಲವನ್ನು ಬಲಪಡಿಸುವುದಲ್ಲದೆ ಜ್ಞಾಪಕ ಶಕ್ತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.
ಕರುಳಿನ ಕ್ಯಾನ್ಸರ್ ಅಪಾಯದಿಂದ ಪಾರು ಮಾಡುವ ಖರ್ಜೂರವು ಜೀರ್ಣಕ್ರಿಯೆಗೆ ಮಾತ್ರವಲ್ಲ, ಅನ್ನನಾಳ ಮತ್ತು ಕೊಲೊನ್ ಅನ್ನು ಬ್ಯಾಕ್ಟೀರಿಯಾದಿಂದಲೂ ಮುಕ್ತವಾಗಿಡುತ್ತದೆ. ಹೀಗಾಗಿ ಇದು ಅತ್ಯಂತ ಅಪಾಯಕಾರಿ ಕರುಳಿನ ಕ್ಯಾನ್ಸರ್ ನ ಹಿಡಿತದಿಂದ ದೊಡ್ಡ ಕರುಳನ್ನು ರಕ್ಷಿಸಿ ಜೀರ್ಣಾಂಗ ವ್ಯವಸ್ಥೆಯೂ ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಖರ್ಜೂರವು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ಇದರಲ್ಲಿ ನೈಸರ್ಗಿಕ ಸಕ್ಕರೆಗಳು, ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್ ಇರುತ್ತದೆ. ಅವು ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಪಾನೀಯಗಳಿಗಿಂತ ಭಿನ್ನವಾಗಿ ಖರ್ಜೂರದಲ್ಲಿ ಫೈಬರ್, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ಗಳು ಮತ್ತು ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ ಗಳು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ಖರ್ಜೂರದಲ್ಲಿ ವಿಟಮಿನ್ B6 ಇದ್ದು, ಇದು ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಅಲ್ಲದೇ ಇವುಗಳಲ್ಲಿರುವ ಸೆರೋಟೋನಿನ್ ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಖರ್ಜೂರದಲ್ಲಿರುವ ನೊರ್ಪೈನ್ಫ್ರಿನ್ ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ. ವಿಟಮಿನ್ B6 ಕಡಿಮೆ ಇರುವ ಜನರಲ್ಲಿ ಖಿನ್ನತೆಯು ಹೆಚ್ಚು ಸಾಮಾನ್ಯ ಎಂದು ಸಂಶೋಧನೆ ಹೇಳುತ್ತದೆ. ಟೆನ್ಷನ್ ಕಡಿಮೆಯಾದಾಗ ಮಾತ್ರ ನಮ್ಮ ಮೂಡ್ ಚೆನ್ನಾಗಿದ್ದು ಮೆದುಳು ಸಕ್ರಿಯವಾಗಿ ಕೆಲಸ ಮಾಡುವಂತೆ ಮಾಡುತ್ತದೆ.
ಖರ್ಜೂರದಲ್ಲಿರುವ ಪೊಟ್ಯಾಶಿಯಂ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಈ ಕೊಲೆಸ್ಟ್ರಾಲ್ ನಮ್ಮ ಹೃದಯಕ್ಕೆ ರಕ್ತ ಪೂರೈಕೆ ಮಾಡುವ ಅಪಧಮನಿಗಳಲ್ಲಿ ಶೇಖರಣೆಯಾಗುತ್ತದೆ. ಇದು ಹೆಚ್ಚಾದಾಗ ರಕ್ತ ಪೂರೈಕೆ ನಿಂತು ಹೃದಯಾಘಾತ, ಹೃದ್ರೋಗ ಇತ್ಯಾದಿಗಳು ಬರುತ್ತವೆ. ಹಾಗಾಗಿ, ಖರ್ಜೂರ ಸೇವನೆಯು ಪೊಟ್ಯಾಸಿಯಮ್ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.