ಸಮಗ್ರ ನ್ಯೂಸ್: ಪ್ರೀತಿಸಿದ ಹುಡುಗನನ್ನು ನಂಬಿಕೊಂಡು ತುಮಕೂರಿನಿಂದ ಬೆಂಗಳೂರಿಗೆ ಬಂದ ಹುಡುಗಿಯ ಮೇಲೆ ಪ್ರೀತಿಸಿದ ಯುವಕ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಮಾಡಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರೀತಿಸಿದ ಪ್ರೇಮಿಗಳು “ಜೊತೆಯಾಗಿ ಹಿತವಾಗಿ ಸೇರಿ ನಡೆವಾ ಸೇರಿ ನುಡಿವ” ಎಂಬ ಹಾಡಿನಂತೆ ತಮ್ಮ ಜೀವನವನ್ನು ಗುರಿ ತಲುಪಿಸಲು ಹಾತೊರೆಯುತ್ತಾರೆ. ಆದರೆ ಇಲ್ಲೊಬ್ಬ ಭೂಪ ಜೀವನಪೂರ್ತಿ ನಿನ್ನ ಜೊತೆಗಿರ್ತೀನಿ ಎಂದು ಭರವಸೆ ನೀಡಿ ಪ್ರೀತಿಸಿದ ಯುವಕನನ್ನು ನಂಬಿಕೊಂಡು ಬಂದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಅದಲ್ಲದೆ ತಾನು ಮಾತ್ರವಲ್ಲದೇ ತನ್ನ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದಾನೆ ಈ ಬಗ್ಗೆ ಸಂತ್ರಸ್ತ ಯವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಈ ಘಟನೆ ನಡೆದಿರುವುದು ಘಟನೆ ನಡೆದಿರುವುದು ಬೆಂಗಳೂರಿನ ಗಿರಿನಗರದ ಈರಣ್ಣಗುಡ್ಡೆಯಲ್ಲಿ. ಪ್ರಕರಣದಲ್ಲಿ ಪುರುಷೋತ್ತಮ್ ಹಾಗು ಚೇತನ್ ಬಂಧಿತ ಆರೋಪಿಗಳು. ಅತ್ಯಾಚಾರಕ್ಕೊಳಗಾದ ಯುವತಿ ತುಮಕೂರಿನವಳಾಗಿದ್ದು, ಪ್ಯಾರಾಮೆಡಿಕಲ್ ಅಭ್ಯಾಸ ಮಾಡುತ್ತಿದ್ದಳು.
ಪುರುಷೋತ್ತಮ್ ಹಾಗು ಯುವತಿ ಒಂದು ವರ್ಷದಿಂದ ಲವ್ ಮಾಡುತ್ತಿದ್ದರು. ಆದರೆ ಕಳೆದ ಒಂದು ವಾರದ ಹಿಂದೆ ಯುವತಿಯನ್ನು ಭೇಟಿ ಮಾಡಿದ್ದ ಪ್ರಿಯಕರ ಪುರುಷೋತ್ತಮ್ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದನು. ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿ ನನ್ನ ಮೊಬೈಲ್ ವಾಪಸ್ ಕೊಡು ಎಂದು ಕೇಳಿದ್ದಳು. ಈ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಾ, ನಿನ್ನ ಮೊಬೈಲ್ ಕೊಡ್ತಿನಿ ಎಂದು ಹೇಳಿದ್ದನು. ಈತನನ್ನು ನಂಬಿಕೊಂಡು ಮಂಗಳವಾರ (ಜೂ.6) ರಂದು ಯುವತಿ ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದಿದ್ದಾಳೆ. ಈ ವೇಳೆ ಮೊಬೈಲ್ ರೂಮ್‌ನಲ್ಲಿದೆ ಎಂದು ಹೇಳಿ ಯುವತಿಯನ್ನ ಪುಸಲಾಯಿಸಿ ಗಿರಿನಗರದ ಈರಣ್ಣಗುಡ್ಡೆಯ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದ್ದಾನೆ.
ಇನ್ನು ರೂಮಿಗೆ ಬಂದ ಯುವತಿ ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಎಂದು ಕೇಳಿದ್ದಾಳೆ. ಆದರೂ ಮೊಬೈಲ್ ಕೊಡದ ಪ್ರಿಯಕರ ಇವತ್ತು ಇಲ್ಲೆ ಇರು ಅಂತ ಹೇಳಿದ್ದಾನೆ. ಇಲ್ಲ ನಾನು ಇರೋದಿಲ್ಲ ಮನೆಗೆ ಹೋಗಬೇಕು ಎಂದು ಹಠ ಮಾಡಿದ್ದ ಯುವತಿಯ ಮೇಲೆ ಪ್ರಿಯಕರ ಬಲವಂತವಾಗಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ್ದಾನೆ. ಈ ಘಟನೆ ನಡೆದ ನಂತರ ಪುರುಷೋತ್ತಮ್‌ನ ಸ್ನೇಹಿತ ಚೇತನ್ ಯುವತಿಯಿದ್ದ ಕೋಣೆಗೆ ಬಂದಿದ್ದಾನೆ. ಆಗ, ಯುವತಿ ಮೇಲೆ ಆತ ಕೂಡ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಗಿರಿನಗರದಲ್ಲಿ ಯುವಕರ ಕೋಣೆಯಲ್ಲಿ ಹುಡಗಿಯ ಚೀರಾಟವನ್ನು ಕೇಳಿದ ಅಕ್ಕಪಕ್ಕದ ಮೆನೆಯವರು ಹುಡುಗರ ರೂಮಿನತ್ತ ಬಂದಿದ್ದಾರೆ. ಯುವಕರಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿ ಕೂಡಲೇ ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸದ್ಯ ಯುವತಿಯನ್ನ ರಕ್ಷಣೆ ಮಾಡಿದ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಪೋಷಕರ ಬಳಿ ಬಿಟ್ಟಿದ್ದಾರೆ. ಇನ್ನು ಆರೋಪಿಗಳಾದ ಚೇತನ್ ಹಾಗು ಪುರುಷೋತ್ತಮ್ ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಘಟನೆ ಕುರಿತಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.