Ad Widget .

ಭಾರತಕ್ಕೆ ಗಂಡಾಂತರ ಕಾದಿದೆ – ಕೋಡಿಮಠ ಶ್ರೀ ಭವಿಷ್ಯ

ಸಮಗ್ರ ನ್ಯೂಸ್: ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Ad Widget . Ad Widget .

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವರ್ಷ ದೊಡ್ಡ ಅವಘಡ ನಡೆಯಲಿದೆ ಎಂದು ಹೇಳಿದ್ದೆ, ಅದರಂತೆಯೇ ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದೆ. ಈ ವರ್ಷ ದೇಶಕ್ಕೆ ಇನ್ನೊಂದು ಗಂಡಾಂತರ ಕಾದಿದೆ ಎಂದು ಹೇಳಿದರು.

Ad Widget . Ad Widget .

ಈ ವರ್ಷ ಗುಡುಗು, ಮಿಂಚು ಹೆಚ್ಚಾಗಲಿದೆ, ಎರಡರಿಂದ ಮೂರು ದೇಶಗಳು ನೀರಿನಲ್ಲಿ ಮುಳುಗಲಿವೆ, ಎಲ್ಲೋ ನಡೆಯುವ ಬಾಂಬ್ ದಾಳಿಯಿಂದ ಭಾರತಕ್ಕೆ ಅನಾಹುತ ಸಂಭವಿಸಲಿದೆ ಎಂದು ಭವಿಷ್ಯ ಹೇಳಿದರು.

ಕೋಡಿಮಠ ಶ್ರೀಗಳು ಹೇಳಿರುವಂತೆ ಈ ಬಾರಿ ಭಾರತಕ್ಕೆ ಕೂಡ ಪ್ರವಾಹದ ಭೀತಿ ಕಾದಿದೆಯಾ ಎನ್ನುವ ಆತಂಕ ಮೂಡಿದೆ. ಬಿಪರ್ ಜಾಯ್ ಚಂಡಮಾರುತದಿಂದ ಕರ್ನಾಟಕ, ಮಹಾರಾಷ್ಟ್ರ, ಕೇರಳದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗ್ನೇಯ ರಾಜ್ಯಗಳಲ್ಲಿ ಕೂಡ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸೂಚನೆ ನೀಡಿದೆ. ಈ ವರ್ಷ ಭಾರಿ ಪ್ರವಾಹ ಎದುರಿಸುವ ಇನ್ನೆರಡು ದೇಶಗಳು ಯಾವುವು ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

Leave a Comment

Your email address will not be published. Required fields are marked *