ಮಂಗಳೂರು: ಹೂಡಿಕೆಯ ಆಮಿಷವೊಡ್ಡಿ 1.64 ಲಕ್ಷ ರೂ ವಂಚನೆ

ಸಮಗ್ರ ನ್ಯೂಸ್: ಹಣ ಹೂಡಿಕೆಯ ಆಮಿಷವೊಡ್ಡಿ 1.64ಲಕ್ಷ ಹಣ ವಂಚನೆ ಮಾಡಿರುವ ಘಟನೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget ... ..

ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಅಪರಿಚಿತ ವ್ಯಕ್ತಿ ದೂರುದಾರರಿಗೆ ಜೂ.4ರಂದು ಇನ್‌ಸ್ಟಾಗ್ರಾಂ ಮೆಸೆಂಜರ್‌ನಲ್ಲಿ ಸಂದೇಶ
ಮತ್ತು ಲಿಂಕ್ ಕಳುಹಿಸಿದ್ದು, ಆ ಲಿಂಕ್ ಕ್ಲಿಕ್ ಮಾಡಿದಾಗ ಇನ್‌ಸ್ಟಾಗ್ರಾಂ ಖಾತೆಯ ಪೇಜ್ ತೆರೆದುಕೊಂಡಿತ್ತು. ಬಳಿಕ ಅಪರಿಚಿತ ವ್ಯಕ್ತಿ 50,000 ರೂ. ಹೂಡಿಕೆ ಮಾಡಿದರೆ 4,90,000 ರೂ. ಲಾಭಾಂಶ ಸಿಗುವುದಾಗಿ ಹೇಳಿದಾಗ ಅದರಂತೆ 50,000 ರೂ. ಹಣವನ್ನು ವರ್ಗಾಯಿಸಿದರು. ಈ ವೇಳೆಯಲ್ಲಿ ಅಪರಿಚಿತ ವ್ಯಕ್ತಿಯು 6,90,000 ರೂ. ಲಾಭಾಂಶ ಬಿಟ್‌ಕಾಯಿನ್ ರೂಪದಲ್ಲಿ ಬಂದಿರುವುದಾಗಿ ತಿಳಿಸಿ, ಸ್ಕ್ರೀನ್ ಶಾಟ್ ಕೂಡ ಕಳುಹಿಸಿದ್ದು ಅದನ್ನು ಖಾತೆಗೆ ಜಮೆ ಮಾಡಬೇಕಾದರೆ 64,000 ರೂ. ವರ್ಗಾಯಿಸುವಂತೆ ಹೇಳಿದ್ದಾನೆ ಎನ್ನಲಾಗಿದೆ.

Ad Widget

ದೂರುದಾರರು ಮತ್ತೆ ಕಮಿಷನ್ ಮೊತ್ತವಾಗಿ ಹಣ ನೀಡುವಂತೆ ಅಪರಿಚಿತ ವ್ಯಕ್ತಿ ಹೇಳಿದಾಗ ಕೂಡ ಹಣ ವರ್ಗಾಯಿಸಿದ್ದರು. ಅನಂತರ ಲಾಭಾಂಶದ ಎಲ್ಲ ಹಣವನ್ನು ಖಾತೆಗೆ ಜಮೆ ಮಾಡಬೇಕಾದರೆ ಇನ್‌ಸ್ಟಾಗ್ರಾಂ ಖಾತೆಯನ್ನು ಖಾತರಿಗೊಳಿಸಬೇಕು ಎಂದು ಹೇಳಿ ಖಾತೆಯ ಪ್ರೊಫೈಲ್ ಎಡಿಟ್ ಮಾಡಿ ತಾನು ನೀಡಿದ ಇ-ಮೇಲ್ ಐಡಿಗೆ ಹಾಕುವಂತೆ ಹೇಳಿದ್ದಾನೆ. ಅದರಂತೆ ದೂರುದಾರರು ಮಾಡಿದಾಗ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿ ಆ ಇನ್‌ಸ್ಟಾ ಗ್ರಾಂ ಖಾತೆಯನ್ನು ಬಳಸಿ ಅಪರಿಚಿತ ವ್ಯಕ್ತಿಯು ಅವರ ಸ್ನೇಹಿತರಿಗೆ ಹಣ ಹೂಡಿಕೆ ಮಾಡುವಂತೆ ಸಂದೇಶಗಳನ್ನು ಕಳುಹಿಸಿದ್ದಾನೆ. ಅಪರಿಚಿತ ವ್ಯಕ್ತಿಯು ಒಟ್ಟು 1.64ಲಕ್ಷ ರೂ. ವಂಚಿಸಿದ್ದಾನೆ ಎಂಬುದಾಗಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *