Ad Widget .

ಸರ್ಕಾರದ ಫ್ರೀ ಭಾಗ್ಯದಿಂದ ಗ್ರಾಹಕರ ಜೇಬಿಗೆ ಕತ್ತರಿ| ಹಾಲಿನ ದರ ಲೀಟರ್ ಗೆ ₹5 ಏರಿಕೆ ಪ್ರಸ್ತಾವನೆ

ಸಮಗ್ರ ನ್ಯೂಸ್: ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ಹಾಲಿನ ದರ ಹೆಚ್ಚಳದ ಶಾಕ್ ನೀಡುವ ಸಾಧ್ಯತೆ ಇದೆ. ಹಾಲಿನ ದರ ಪರಿಷ್ಕರಣೆಗೆ ಹಾಲು ಒಕ್ಕೂಟಗಳು ಪಟ್ಟು ಹಿಡಿದಿದ್ದು, ಪ್ರತಿ ಲೀಟರ್ ಹಾಲಿನ ದರವನ್ನು 5 ರೂಪಾಯಿ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಬಮೂಲ್ ಚಿಂತನೆ ನಡೆಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹಾಲು ಉತ್ಪಾದಕ ರೈತರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನ ಕಡಿತಗೊಳಿಸಲು ಹಾಲು ಒಕ್ಕೂಟಗಳು ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯ ರೈತರ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸದೇ ಯಥಾಸ್ಥಿತಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ.

Ad Widget . Ad Widget . Ad Widget .

ಕಡಿತಗೊಳಿಸಿದ್ದ ಪ್ರೋತ್ಸಾಹ ಧನವನ್ನು ರೈತರಿಗೆ ಮತ್ತೆ ನೀಡಲು ಹಾಲು ಒಕ್ಕೂಟಗಳು ಮುಂದಾಗಿವೆ. ಹಾಲಿನ ದರ ಪರಿಷ್ಕರಿಸುವಂತೆ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿವೆ. ಒಂದು ಲೀಟರ್ ಹಾಲಿನ ಬೆಲೆಯನ್ನು 5 ರೂಪಾಯಿ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದ್ದಾರೆ.

ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 39 ರೂಪಾಯಿ ಇದ್ದು, ಹಾಲು ಉತ್ಪಾದಕರ ಸಂಘಕ್ಕೆ 35.50 ರೂ. ಕೊಡಲಾಗುತ್ತಿದೆ. ಮಾರಾಟಗಾರರಿಗೆ ಪ್ರತಿ ಲೀಟರ್ ಗೆ 2 ರೂಪಾಯಿ ಕಮಿಷನ್ ನೀಡಬೇಕು. ಇದರ ನಡುವೆ ಕೇವಲ 1.50 ರೂ. ಅಂತರವಿದ್ದು, ಇಷ್ಟು ಲಾಭದಿಂದ ವ್ಯವಹಾರ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಾಲಿನ ದರವನ್ನು ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಲಾಗಿದೆ.

Leave a Comment

Your email address will not be published. Required fields are marked *