Ad Widget .

ತೀವ್ರ ಸ್ವರೂಪ ಪಡೆದುಕೊಂಡ ‘ಬಿಫರ್ ಜಾಯ್’ ಚಂಡಮಾರುತ| ಕರಾವಳಿ ಪ್ರಕ್ಷುಬ್ದ; ಭಾರೀ ಗಾಳಿ ಮಳೆ ಸಾಧ್ಯತೆ| ಮುಂಗಾರು ಮಳೆಯಲ್ಲಿ ಉಂಟಾಗಲಿದೆ ವ್ಯತ್ಯಯ

ಸಮಗ್ರ ನ್ಯೂಸ್: ರಾಜ್ಯದ ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಸೋಮವಾರ ಉಂಟಾದ ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಎದ್ದಿರುವ ಈ ಚಂಡಮಾರುತ ‘ಬಿಪೋರ್‌ಜಾಯ್’ ತೀವ್ರಗೊಂಡು ಉತ್ತರ ದಿಕ್ಕಿನತ್ತ ಗಂಟೆಗೆ 5ಕಿ.ಮೀ ವೇಗದಲ್ಲಿ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Ad Widget . Ad Widget .

ಇಂದು ಚಂಡಮಾರುತವು ಗೋವಾದಿಂದ ನೈಋತ್ಯದಲ್ಲಿ 880ಕಿ.ಮೀ. ದೂರದಲ್ಲಿ, ಮುಂಬಯಿಯಿಂದ ನೈಋತ್ಯ ದಿಕ್ಕಿನಲ್ಲಿ 990 ಕಿ.ಮೀ., ಪೋರ್‌ಬಂದರಿನಿಂದ 1060 ಹಾಗೂ ಕರಾಚಿಯಿಂದ 1360ಕಿ.ಮೀ ದೂರದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ವರದಿ ತಿಳಿಸಿದೆ.

Ad Widget . Ad Widget .

ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವು ಇನ್ನಷ್ಟು ತೀವ್ರಗೊಳ್ಳಲಿದ್ದು, 24 ಗಂಟೆಗಳಲ್ಲಿ ಅದು ಉತ್ತರ ದಿಕ್ಕಿನಲ್ಲಿ ಹಾಗೂ ಮುಂದಿನ ಮೂರು ದಿನಗಳಲ್ಲಿ ಉತ್ತರ- ಈಶಾನ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ.

ಇದರ ಪ್ರಭಾವದಿಂದ ರಾಜ್ಯ ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗಾಳಿಯೊಂದಿಗೆ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 24 ಗಂಟೆಗಳಲ್ಲಿ ರಾಜ್ಯ ಕರಾವಳಿಯಲ್ಲಿ ಗಂಟೆಗೆ 40ರಿಂದ 50ಕಿ.ಮೀ. (ಗರಿಷ್ಠ 60ಕಿ.ಮೀ.) ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಕಡ್ಡಾಯವಾಗಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಬಿರುಗಾಳಿಯಿಂದಾಗಿ ಸಮುದ್ರದಲ್ಲಿ 2.3ಮೀ.ನಿಂದ 3.2ಮೀ. ಎತ್ತರ ಅಲೆಗಳು ಅರಬಿಸಮುದ್ರದಲ್ಲಿ ಕಾರವಾರದಿಂದ ಮಂಗಳೂರುವರೆಗೆ ಏಳುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ನಡುವೆ ಕೇರಳಕ್ಕೆ ಇಂದು ಅಥವಾ ನಾಳೆ ಮಾನ್ಸೂನ್ ಮಾರುತಗಳು ಪ್ರವೇಶಿಸಲಿದ್ದು ಮಳೆ ಆರಂಭವಾಗಲಿದೆ. ಅರಬ್ಬಿ ಸಮುದ್ರದಲ್ಲಿ ಈ ಪ್ರಬಲ ಹವಾಮಾನ ಬದಲಾವಣೆಯಿಂದ ಮುಂಗಾರು ಒಳನಾಡಿನ ಮೇಲೆ ಪರಿಣಾಮ ಬೀರಲಿದ್ದು, ನಿರೀಕ್ಷೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಕರಾವಳಿ ಭಾಗಗಳನ್ನು ತಲುಪಬಹುದು. ಆದರೆ ಪಶ್ಚಿಮ ಘಟ್ಟಗಳ ಆಚೆಗೆ ಹೋಗಲು ಹೆಣಗಾಡುತ್ತದೆ ಅಂತಲೂ ತಿಳಿಸಿದೆ.

ನೈಋತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1 ರಿಂದ ಸುಮಾರು ಏಳು ದಿನಗಳ ಪ್ರಮಾಣಿತ ವಿಚಲನದೊಂದಿಗೆ ಕೇರಳಗೆ ಪ್ರವೇಶಿಸುತ್ತದೆ. ಜೂನ್ 4ರ ವೇಳೆಗೆ ದಕ್ಷಿಣ ರಾಜ್ಯಕ್ಕೆ ಆಗಮಿಸಬಹುದು ಎಂದು ಐಎಂಡಿ ಈ ಹಿಂದೆ ಮುನ್ಸೂಚನೆ ನೀಡಿತ್ತು.

ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯ ರಚನೆಯಿಂದಾಗಿ ಕೇರಳಕ್ಕೆ ಮುಂಗಾರು ಪ್ರವೇಶ ಮತ್ತಷ್ಟು ವಿಳಂಬವಾಗಿದೆ. ವಿಜ್ಞಾನಿಗಳ ಪ್ರಕಾರ, ದೇಶದ ಇತರೆ ಭಾಗಗಳಿಗೆ ಮುಂಗಾರು ತಡವಾಗಿ ಪ್ರವೇಶಿಸಲಿದೆ. ಆದರೂ ಈ ಋತುವಿನಲ್ಲಿ ಭಾರತದ ಒಟ್ಟು ಮಳೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *