Ad Widget .

ಉಳ್ಳಾಲ: 24 ಪುಟಗಳ ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ|ನೂತನ ಮನೆ ಖರೀದಿಸಿದ ಐದೇ ದಿನದಲ್ಲಿ ಏನಾಯಿತು ಈಕೆಗೆ..?| ಇದಕ್ಕೆಲ್ಲ ಕಾರಣ ಬ್ಯಾಂಕ್ ಅಧಿಕಾರಿಗಳ..!

ಸಮಗ್ರ ನ್ಯೂಸ್: ಯುವತಿಯೋರ್ವಳು 24 ಪುಟಗಳ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ.

Ad Widget . Ad Widget .

ಮೂಲತ: ಫರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದ ಅಶ್ವಿನಿ ಬಂಗೇರ(25)ಆತ್ಮ ಹತ್ಯೆಗೈದ ಯುವತಿ.ನಿನ್ನೆ ರಾತ್ರಿ ಅಶ್ವಿನಿ ತನ್ನ‌ ಸ್ನೇಹಿತೆ ಜೊತೆ ಚಾಟ್ ಮಾಡಿದ್ದಲೆನ್ನಲಾಗಿದ್ದು ಸ್ನೇಹಿತೆ ಬೆಳಿಗ್ಗೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದು ಬೆಳಕಿಗೆ ಬಂದಿದೆ. ಅಶ್ವಿನಿ ಬರೆದ 24 ಪುಟಗಳ ಡೆತ್ ನೋಟ್ ಪೊಲೀಸರಿಗೆ ದೊರೆತಿದೆ. ಡೆತ್ ನೋಟಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿದ್ದು ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆಯಂತೆ. ಅಶ್ವಿನಿ ಸಾಮಾನ್ಯ ಕುಟುಂಬದವಲಾಗಿದ್ದು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದಳು. ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತ ಎಂಬವರಿಂದ ಅಶ್ವಿನಿಯೆ ಮನೆಯೊಂದನ್ನ ಖರೀದಿಸಿದ್ದು ಕಳೆದ ಜೂ.3 ರಂದು ಗೃಹ ಪ್ರವೇಶ ಮಾಡಿ ತಾಯಿ ದೇವಕಿ ,ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದರೆನ್ನಲಾಗಿದೆ.

Ad Widget . Ad Widget .

ಡೆತ್ ನೋಟಲ್ಲಿ ಅಶ್ವಿನಿ ತನ್ನ ಪ್ರಿಯಕರನ ಹೆಸರು ಉಲ್ಲೇಖಿಸಿ ಐ ಲವ್ ಯೂ ಅಂತ ಬರೆದಿದ್ದು ತಾನು ಬಳಸುತ್ತಿದ್ದ ಐ ಫೋನನ್ನ ಆತನಿಗೆ ನೀಡಬೇಕೆಂದು ಹೇಳಿದ್ದಾಳೆ. ಅಶ್ವಿನಿಯ ತಾಯಿ ಮಗಳನ್ನ ನೆನೆದು ಮನೆಯೊಳಗಡೆ ಬಿದ್ದು ಹೊರಳಾಡುತ್ತಿರುವ ದೃಶ್ಯ ಮನಕಲಕುವಂತಿತ್ತು.

ಹಲವು ಸಂಕಷ್ಟಗೊಳಗಾದ ಅಶ್ವಿನಿ‌ ಖಿನ್ನತೆಗೊಳಗಾಗಿ ಆತ್ಮ ಹತ್ಯೆಗೈದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಮೃತ ದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Leave a Comment

Your email address will not be published. Required fields are marked *