ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಿಲ್ಲಾ ಪಂಚಾಯಿತಿಯಿಂದ ಚುನಾವಣೆಗೆ ಮೊದಲು ಹಲವು ರಸ್ತೆಗಳನ್ನು ಡಾಮರೀಕರಣ ಮಾಡಿರುತ್ತಾರೆ. ಇದರಲ್ಲಿ ಭಾಗಶಃ ಕಳಪೆ ಕಾಮಗಾರಿಯಿಂದ ಕೂಡಿರುತ್ತದೆ ಇದಕ್ಕೆ ಸಾಕ್ಷಿ ಎಂಬುವಂತೆ ಗೌಡಳ್ಳಿ ಗ್ರಾಮದ ಪುಲಗಿರಿ ದೇವಸ್ಥಾನದ ರಸ್ತೆ 2.50 ಲಕ್ಷ ರಸ್ತೆ ಸಂಪೂರ್ಣವಾಗಿ ಹುಲ್ಲಿನಿಂದ ಕೂಡಿದ್ದು ಡಾಮರೀಕರಣ ಕೆಳಭಾಗದಿಂದ ಹುಲ್ಲು ಬರುತಿದ್ದು ಡಾಮರೀಕರಣ ಎಲ್ಲವೂ ಕಿತ್ತು ಹೋಗುತ್ತಿದೆ. ಹೆಗಳ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ 2.50 ಲಕ್ಷದ ಡಾಮರೀಕರಣ ಆಗಿರುತ್ತದೆ ಈ ರಸ್ತೆ ನಿರ್ಮಾಣವಾದ ಒಂದು ತಿಂಗಳಿನಲ್ಲೇ ಅಲ್ಲಲ್ಲಿ ಬೃಹಧಾಕಾರದ ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿರುತ್ತದೆ.
ಬಸವನಕೊಪ್ಪ ಗ್ರಾಮದ ಗದ್ದೆಗೆ ಹೋಗುವ ರಸ್ತೆಯು 2.50 ಲಕ್ಷದಲ್ಲಿ ಡಾಮರೀಕರಣಗೊಂಡಿರುತ್ತದೆ. ರಸ್ತೆಯ ಭಾಗದಲ್ಲಿ ಹುಲ್ಲುಗಳು ಹುಟ್ಟಿಕೊಂಡಿದ್ದು, ಇದೆ ರಸ್ತೆಯ ಡಾಮರೀಕರಣ ಅಡಿಯಿಂದ ಹುಲ್ಲು ಬಂದಿರುವುದು ಕಂಡು ಬಂದಿದೆ. ಹಾಗಾಗಿ ಈ ಯಾವುದೇ ರಸ್ತೆಗಳಿಗೆ ಚುನಾವಣಾ ಮೊದಲು ಮಾಡಿದಂತಹ ರಸ್ತೆಗಳಿಗೆ ಯಾವುದೇ ಹಣ ಬಿಡುಗಡೆ ಮಾಡದೆ ಈಗ ಮಾಡಿರುವ ಡಾಮರಿಕರಣ ಸಂಪೂರ್ಣ ತೆಗೆದು ಉತ್ತಮವಾಗಿ ಮರು ಡಾಮರೀಕರಣ ಮಾಡಿಕೊಡಬೇಕು ಎಲ್ಲಾ ರಸ್ತೆ ಕಳಪೆ ಕಾಮಗಾರಿ ಮಾಡಿದಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಹಾಗೂ ಇಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ಗೌಡಳ್ಳಿ ನವದುರ್ಗಾಪರಮೇಶ್ವರಿ ದೇವಾಲಯದ ಸಮುದಾಯ ಭವನದ ಅಧ್ಯಕ್ಷರಾದ ಮಹೇಶ್ ರವರು ಹಾಗೂ ರಾಮನಹಳ್ಳಿ ಕರವೇ ಎಂದು ಉಪಾಧ್ಯಕ್ಷರಾದ ರಕ್ಷಿತ್ ರವರು ಆಗ್ರಹಿಸಿದ್ದಾರೆ.