Ad Widget .

ಬ್ಯಾಂಕ್ ಅಧಿಕಾರಿ, ಗುಮಾಸ್ತ ಹುದ್ದೆಗೆ ಅರ್ಜಿ ಅಹ್ವಾನ

ಸಮಗ್ರ ನ್ಯೂಸ್: ಉದ್ಯೋಗಗಳ ಅವಕಾಶ ಕಡಿಮೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಐಬಿಪಿಎಸ್ (IBPS) ವತಿಯಿಂದ ರೀಜನಲ್ ರೂರಲ್ ಬ್ಯಾಂಕ್‍ಗಳಲ್ಲಿ ಖಾಲಿ ಇರುವ 8600 ಕ್ಕೂ ಹೆಚ್ಚು ಕ್ಲರಿಕಲ್ ಮತ್ತು ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ‌

Ad Widget . Ad Widget .

ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಜೂನ್, 21 ರವರೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ https://ibps.in/ ವೀಕ್ಷಿಸಬಹುದಾಗಿದೆ. ಈಗಾಗಲೇ ಅರ್ಜಿ ಆಹ್ವಾನಿಸಿರುವ ಐಬಿಪಿಎಸ್ ರೀಜನಲ್ ರೂರಲ್ ಬ್ಯಾಂಕ್ ಕ್ಲೆರಿಕಲ್ ಮತ್ತು ಆಫೀಸರ್ಸ್ ಹುದ್ದೆಗಳ ನೇಮಕಾತಿ ಪರೀಕ್ಷೆ ಮತ್ತು ಎಸ್‍ಎಸ್‍ಸಿ (SSC) ನೇಮಕಾತಿ ಪರೀಕ್ಷೆಗಳಿಗೆ ಹಾಗೂ ಮುಂಬರುವ ಎಲ್ಲಾ ಬ್ಯಾಂಕ್, ಎಸ್‍ಎಸ್‍ಸಿ ಪರೀಕ್ಷೆಗಳಿಗೆ ಅನುಭವಿ ನುರಿತ ವಿಷಯ ತಜ್ಞರಿಂದ ಟೈಮ್ ಮ್ಯಾನೇಜ್‍ಮೆಂಟ್ ಸ್ಕಿಲ್ಸ್ ನೊಂದಿಗೆ ರಿಯಾಯಿತಿ ದರದಲ್ಲಿ ತರಬೇತಿ ನೀಡಲಾಗುವುದು. ಆಸಕ್ತರು ಜೂನ್, 15 ರೊಳಗೆ 8660217739 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್‍ನ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *