ಸಮಗ್ರ ನ್ಯೂಸ್ : ಕೇರಳವು ತನ್ನದೇ ಸ್ವಂತ ಇಂಟರ್‌ನೆಟ್ ಸೇವೆಯನ್ನು ಹೊಂದುವ ಮೂಲಕ ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಅಂತರ್ಜಾಲ ಸೇವೆ ಒದಗಿಸುವ ರಾಜ್ಯ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ (K-FON)ಗೆ ಸಿಎಂ ಪಿಣರಾಯಿ ವಿಜಯನ್ ಚಾಲನೆ ನೀಡಿದ್ದು, ಇದು 1 Gbps ಸ್ಪೀಡ್ ಹೊಂದಿದೆ. ಆ ಮೂಲಕ ಸಮಾರು 20 ಲಕ್ಷ ಕುಟುಂಬಗಳಿಗೆ ಉಚಿತ ಇಂಟರ್‌ನೆಟ್ ಸೇವೆ ಒದಗಿಸಲಾಗುವುದು. ಜತೆಗೆ 17,412 ಸರ್ಕಾರಿ ಕಚೇರಿಗಳಿಗೆ K-FON ಸಂಪರ್ಕ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಈಗಾಗಲೇ ಏಳು ಸಾವಿರ ಕುಟುಂಬಗಳು ಇದರ ಪ್ರಯೋಜನ ಪಡೆದಿದೆ. ಉಚಿತ ಇಂಟರ್ ನೆಟ್ ನೀಡುವುದರೊಂದಿಗೆ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮವನ್ನು ಪಂಚಾಯತ್‌ಗಳ ಮೂಲಕ ಪ್ರತಿ ಹಳ್ಳಿ ಗ್ರಾಮಗಳಿಗೆ ತಲುಪಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದು, ಇದರಿಂದ ತಳಮಟ್ಟದಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ.