Ad Widget .

ಮಂಗಳೂರು: ಮುಂಗಾರು ವಿಳಂಬ ಹಿನ್ನೆಲೆ| ಕೆಲವೆಡೆ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆ, ಕಚೇರಿ, ಶಾಲಾ-ಕಾಲೇಜುಗಳಲ್ಲಿ ನೀರಿನ ಕೊರತೆ ಉಂಟಾಗಿ ತೊಂದರೆಯಾಗಿದೆ. ಇನ್ನು ಈಗಷ್ಟೇ ಶಾಲಾ-ಕಾಲೇಜುಗಳು ಆರಂಭವಾಗಿದ್ದು ನೀರಿನ ಕೊರತೆಯಿಂದ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನೀರಿನ ಸಮಸ್ಯೆ ಉದ್ಭವವಾದುದರಿಂದ ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿವೆ. ಇನ್ನು ಕೆಲವೆಡೆ ಶಿಕ್ಷಣ ಸಂಸ್ಥೆಗಳು ಅರ್ಧ ದಿನ ತರಗತಿ ನಡೆಸುತ್ತಿವೆ. ಕಾಲೇಜು ವಿದ್ಯರ್ಥಿಗಳಿಗೆ ಆನ್​ ಲೈನ್​ ಮೂಲಕ ಪಾಠಗಳನ್ನು ಮಾಡಲಾಗುತ್ತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ನೀರಿನ ರೇಶನಿಂಗ್‌ ಆರಂಭವಾಗಿದೆ. ನೀರಿನ ರೇಶನಿಂಗ್‌ ಹಿನ್ನೆಲೆ ಮಂಗಳೂರು ಉತ್ತರ ಹಾಗೂ ಮಂಗಳೂರು ನಗರ ಭಾಗಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಮಂಗಳೂರು ಉತ್ತರ ಮತ್ತು ನಗರ ಭಾಗಕ್ಕೆ ಒಂದು ದಿನ ಬಿಟ್ಟು ನೀರು ಬರುತ್ತಿದೆ. ಜೊತೆಗೆ ಕಳೆದ ಎರಡು ದಿನಗಳಲ್ಲಿ ನೀರಿನ ಪೈಪ್​ ಕಾಮಗಾರಿ ನಡೆಯುತ್ತಿದೆ. ಇದರಿಂದ ಮಂಗಳೂರು ಭಾಗದಲ್ಲಿ ನೀರು ಪೂರೈಕೆ ವ್ಯತ್ಯಯವಾಗಿದೆ.

Ad Widget . Ad Widget . Ad Widget .

ವಿಶೇಷವಾಗಿ ಮಂಗಳೂರು ಉತ್ತರ ಹಾಗೂ ದಕ್ಷಿಣ ವಲಯದ ಶಾಲೆಗಳಿಗೂ ನೀರಿನ ಕೊರೆತೆ ಕಾಣಿಸಿಕೊಂಡಿದ್ದು, ಇಲಾಖೆಯ ಪ್ರಕಾರ ಮೂಲ್ಕಿ ಮೂರು ಶಾಲೆಗಳಿಗೆ ಮತ್ತು ವಿಟ್ಲದ ಒಂದು ಶಾಲೆಯಲ್ಲಿ ವಾರಕ್ಕೊಂದು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಇನ್ನೊಂದಡೆ ಪಿಯುಸಿ ಹಾಗೂ ಪದವಿ ತರಗತಿಗಳು ಕೂಡ ಆರಂಭವಾಗಿದ್ದು, ಪ್ರಮುಖ ಹಾಸ್ಟೆಲ್‌ಗಳಲ್ಲಿ ನೀರಿನ ಸಮಸ್ಯೆಗಳು ಕಾಣಿಸಿಕೊಂಡಿದೆ. ನಗರದ ಪ್ರಮುಖ ವಿದ್ಯಾಸಂಸ್ಥೆಯಲ್ಲಿ ದಿನವೊಂದಕ್ಕೆ 10 ಟ್ಯಾಂಕರ್‌ ನೀರನ್ನು ಪೂರೈಕೆ ಮಾಡಿಕೊಂಡು ಪರಿಸ್ಥಿತಿ ಸುಧಾರಣೆ ಮಾಡುವ ಕಾರ‍್ಯವಾಗುತ್ತಿದೆ. ಒಟ್ಟಾರೆ ದ.ಕ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಬರದ ಛಾಯೆ ಕಾಡುತ್ತಿದ್ದು, ಮುಂಗಾರು ಆಗಮನಕ್ಕೆ ಜನ ಕಾಯುತ್ತಿದ್ದಾರೆ.

Leave a Comment

Your email address will not be published. Required fields are marked *