Ad Widget .

ಮಂಗಳೂರು: ಸಾಹಿತ್ಯ ಪುಸ್ತಕಗಳ ಕೊಡುಗೆ- ಜೂ.12ರೊಳಗೆ ನೋಂದಾಯಿಸಲು ಕರೆ

ಸಮಗ್ರನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬಿ.ಆರ್. ನರಸಿಂಹ ರಾವ್ ಉಡುಪಿ ಅವರು ಮಂಗಳೂರು ತಾಲೂಕಿನ ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಾಚನಾಲಯಕ್ಕೆ ಸಾಹಿತ್ಯಿಕ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಿದ್ದಾರೆ.

Ad Widget . Ad Widget .

ಈ ಕೊಡುಗೆಯನ್ನು ಪಡೆಯಲು ಶಾಲೆಗಳ ಮುಖ್ಯಸ್ಥರು ಇದೇ ಜೂ.12ರೊಳಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಅರುಣಾ ನಾಗರಾಜ್ ಮೊಬೈಲ್ ಸಂಖ್ಯೆ: 9141716602 ಅಥವಾ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಸಹ ಕಾರ್ಯದರ್ಶಿ ಯು.ಎಚ್. ಖಾಲಿದ್ ಮಂಗಳೂರು ಮೊಬೈಲ್ ಸಂಖ್ಯೆ: 9845499527 ಅವರನ್ನು ತಮ್ಮ ಶಾಲೆಯ ವಿಳಾಸದೊಂದಿಗೆ ನೋಂದಾಯಿಸಿಕೊಳ್ಳಬೇಕು.

Ad Widget . Ad Widget .

ಮೊದಲು ನೋಂದಾಯಿಸಿಕೊಳ್ಳುವ 50 ಶಾಲೆಗಳಿಗೆ ಪುಸ್ತಕ ವಿತರಿಸಲಾಗುವುದು ವಿತರಣಾ ದಿನಾಂಕ ಮತ್ತು ಸ್ಥಳವನ್ನು ಮುಂದೆ ತಿಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *