Ad Widget .

ಚಂಡಮಾರುತವಾಗಿ ರೂಪುಗೊಂಡ ವಾಯುಭಾರ ಕುಸಿತ| ಕರ್ನಾಟಕದ ಕರಾವಳಿಗೆ ಹೈ ಅಲರ್ಟ್

ಸಮಗ್ರ ನ್ಯೂಸ್: ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಸದ್ಯ ಚಂಡಮಾರುತವಾಗಿ ರೂಪುಗೊಂಡಿದೆ. ಮುಂದಿನ 24 ಗಂಟೆಗಳ ಕಾಲ ಇದೇ ರೀತಿಯಲ್ಲಿ ಹವಾಮಾನ ಮುಂದುವರಿದರೆ ಕರಾವಳಿಗೆ ಬಿಪೋರ್ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಚಂಡಮಾರುತದಿಂದ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸುವುದು ಮತ್ತಷ್ಟು ವಿಳಂಬವಾಗಲಿದೆ. ಮುಂದಿನ 24 ಗಂಟೆಯಲ್ಲಿ ಚಂಡಮಾರುತ ಅಪ್ಪಳಿಸಲಿದ್ದು, ಇದರಿಂದ ದಕ್ಷಿಣ ಭಾರತದ ಪಶ್ಚಿಮ ತೀರಗಳು ಅಪಾಯವನ್ನು ಎದುರಿಸಲಿವೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

Ad Widget . Ad Widget . Ad Widget .

ಪ್ರಸ್ತುತ ಉತ್ತರದತ್ತ ಮುಖ ಮಾಡಿರುವ ಚಂಡಮಾರುತದಿಂದ ನಾಳೆಯಿಂದ ಜೂನ್​ 10ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ಇರಲಿದೆ. ಮುಂದಿನ 24 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಲಿದ್ದು, ಆದ್ದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಾಳೆ ಬೆಳಗಿನ ವೇಳೆಗೆ ಸೈಕ್ಲೋನಿಕ್ ಚಂಡಮಾರುತವು ತೀವ್ರ ಚಂಡಮಾರುತವಾಗಿ ಬದಲಾಗಲಿದ್ದು, ಜೂನ್​ 9ರ ಸಂಜೆ ವೇಳೆಗೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಇದರ ನೇರ ಪರಿಣಾಮ ಕೇರಳ-ಕರ್ನಾಟಕ ಮತ್ತು ಲಕ್ಷದ್ವೀಪ-ಮಾಲ್ಡೀವ್ಸ್ ಕರಾವಳಿಯಲ್ಲಿ ಕಂಡುಬರಲಿದೆ. ಇದರೊಂದಿಗೆ ಕೊಂಕಣ- ಗೋವಾ-ಮಹಾರಾಷ್ಟ್ರ ಕರಾವಳಿ ತೀರದಲ್ಲಿ ಜೂನ್ 8ರಿಂದ 10ರವರೆಗೆ ಸಮುದ್ರದಲ್ಲಿ ಅತಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಹಿಂದಿನ ವರ್ಷಗಳ ದಾಖಲೆಗಳ ಪ್ರಕಾರ, ಈ ಬಾರಿ ಆಗ್ನೇಯ ಮುಂಗಾರು ವಿಳಂಬವಾಗಿದೆ.

2022ರಲ್ಲಿ ನೋಡೋದಾದ್ರೆ ಮೇ ತಿಂಗಳು 29 ರಂದು ಮುಂಗಾರು ಪ್ರಾರಂಭವಾಗಿದೆ. 2021ರಲ್ಲಿ ಜೂನ್ ತಿಂಗಳ 3 ರಂದು ಮುಂಗಾರು ಶುರುವಾಗಿದೆ. 2020 ರಲ್ಲಿ ಜೂನ್ 1 ರಂದು ಮುಂಗಾರು ಅಪ್ಪಳಿಸಿತ್ತು. 2019 ರಲ್ಲಿ ಜೂನ್ ತಿಂಗಳ 8 ರಂದು ಮುಂಗಾರು ಆರ್ಭಟಿಸಿತ್ತು. ಹಾಗೆ 2018 ರಲ್ಲಿ ಮೇ ತಿಂಗಳ 29 ರಂದು ಮುಂಗಾರು ತನ್ನ ಆಟ ಆರಂಭಿಸಿತ್ತು.

ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶ ರಚನೆಯಾಗಲಿದೆ. ಇದರಿಂದ ಇನ್ನೆರಡು ದಿನಗಳಲ್ಲಿ ಚಂಡಮಾರುತದ ಮಾರುತಗಳು ಕೇರಳ ಕರಾವಳಿಯತ್ತ ಮಾನ್ಸೂನ್ ಆಗಮನದ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದೇ ಸಮಯದಲ್ಲಿ, ಸ್ಕೈಮೆಟ್ ಹವಾಮಾನ ಕೇರಳದಲ್ಲಿ 8 ಅಥವಾ 9 ರಂದು ಮುಂಗಾರು ಆಗಮಿಸಬಹುದು. ಆದರೆ ಲಘುವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಹವಾಮಾನ ವೈಪರೀತ್ಯದಿಂದ ಜನರ ಬದುಕನ್ನ ಹಸನಗೊಳಿಸವೇಕಾದ ಮುಂಗಾರು ಇತ್ತೀಚೆಗೆ ರೌದ್ರಾವತಾರ ತಾಳೋದಕ್ಕೆ ಶುರುಮಾಡಿದೆ. ಮಳೆಗಾಗಿ ಕಾಯುತ್ತಿದ್ದ ಜನ ಈಗ ಅದೇ ಮಳೆಗೆ ಬೆಚ್ಚಿಬೀಳೋ ಹಾಗೆ ಆಗಿದೆ.

Leave a Comment

Your email address will not be published. Required fields are marked *