Ad Widget .

ಬಾಲಸೋರ್ ರೈಲು ದುರಂತದ ಬೆನ್ನಲ್ಲೇ, ಒಡಿಶಾದಲ್ಲಿ ಮತ್ತೊಂದು ದುರಂತ

ಸಮಗ್ರ ನ್ಯೂಸ್: ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಬಾಲಸೋರ್ ರೈಲು ದುರಂತದ ಬೆನ್ನಲ್ಲೇ, ಒಡಿಶಾದಲ್ಲಿ ಮತ್ತೊಂದು ರೈಲು ಹಳಿ ತಪ್ಪಿದೆ ಎಂದು ವರದಿಯಾಗಿದೆ. ಬರ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

Ad Widget . Ad Widget .

ಒಡಿಶಾದ ಬಾಲಸೋರ್‌ನಲ್ಲಿ ಮೂರು ದಿನಗಳ ಹಿಂದಷ್ಟೇ ತ್ರಿವಳಿ ರೈಲು ಅಪಘಾತ ಸಂಭವಿಸಿ 275 ಮಂದಿ ಮೃತಪಟ್ಟಿದ್ದರು. ಈ ಕಹಿ ಘಟನೆ ಜನಮಾನಸದಿಂದ ಮಾಸುವ ಮೊದಲೇ ಒಡಿಶಾದಲ್ಲಿ ಮತ್ತೊಂದು ರೈಲು ಹಳ್ಳಿ ತಪ್ಪಿದ್ದು ಒಡಿಶಾದ ಬರಘಢ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ರೈಲಿನ 5 ಬೋಗಿಗಳು ಹಳಿ ತಪ್ಪಿರುವ ಗೂಡ್ಸ್‌ ರೈಲಿನ 5 ಬೋಗಿಗಳು ಹಳಿ ತಪ್ಪಿವೆದ್ದು ಅದರೆ ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ.

Ad Widget . Ad Widget .

ಇನ್ನು, ಈ ಬಗ್ಗೆ ಮಾಹಿತಿ ನೀಡಿದ ರೈಲ್ವೆ ಇಲಾಖೆ, ಇದು ಖಾಸಗಿ ರೈಲು ಹಳಿಯಾಗಿದ್ದು, ಈ ಹಿನ್ನೆಲೆ ಇದರಿಂದ ರೈಲು ಸಂಚಾರಕ್ಕೆ ಯಾವುದೇ ಅಸ್ತವ್ಯಸ್ತವಾಗಿಲ್ಲ. ಇದು ಸಿಮೆಂಟ್‌ ಕಂಪನಿಯ ರೈಲು ಎನ್ನಲಾಗಿದ್ದು, ಅವರದ್ದೇ ಪ್ರತ್ಯೆಕ ಹಳಿಯಾಗಿದ್ದು, ಈ ಹಿನ್ನೆಲೆ ದೇಶದ ಇತರೆ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಸುಣ್ಣದ ಕಲ್ಲು ತೆಗೆದುಕೊಂಡು ಹೋಗುತ್ತಿದ್ದ ಗೂಡ್ಸ್‌ ರೈಲಿನ 5 ಬೋಗಿಗಳು ಹಳಿ ತಪ್ಪಿದೆ. ಡುಂಗ್ರಿ ಸುಣ್ಣದ ಗಣಿಗಳು ಮತ್ತು ಎಸಿಸಿ ಬರ್ಗಢ್‌ನ ಸಿಮೆಂಟ್ ಸ್ಥಾವರದ ನಡುವೆ ಖಾಸಗಿ ನ್ಯಾರೋ ಗೇಜ್ ರೈಲು ಮಾರ್ಗವಿದೆ. ಈ ಲೈನ್, ವ್ಯಾಗನ್‌ಗಳು ಮತ್ತು ಲೋಕೋಮೋಟಿವ್ ಎಲ್ಲವೂ ಖಾಸಗಿಯಾಗಿದ್ದು, ಭಾರತೀಯ ರೈಲ್ವೆ ವ್ಯವಸ್ಥೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *