Ad Widget .

ಮೈಮೇಲೆ ಮರ ಬಿದ್ದು ಸುಳ್ಯಪದವು ವಲಯದ ಕಾಂಗ್ರೆಸ್ ಅಧ್ಯಕ್ಷ ಮೃತ್ಯು

ಸಮಗ್ರ ನ್ಯೂಸ್ : ಪಿಕಪ್ ವಾಹನಕ್ಕೆ ಮರ ತುಂಬಿಸುವ ವೇಳೆ ಮರ ಮೈಮೇಲೆ ಬಿದ್ದು ಸುಳ್ಯಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಮೃತಪಟ್ಟಿರುವ ಘಟನೆ ಜೂ.5 ರಂದು ಬೆಳಿಗ್ಗೆ ವರದಿಯಾಗಿದೆ.

Ad Widget . Ad Widget .

ಬಡಗನ್ನೂರು ಗ್ರಾಮದ ಬಟ್ಯಂಗಲ ದಿ. ಕೊಲ್ಲಯ್ಯ ಒಕ್ಕಲಿಗರವರ ಪುತ್ರ ಗೋಪಾಲಕೃಷ್ಣ ಮೃತಪಟ್ಟರು. ಮನೆಯ ಜಾಗದಲ್ಲಿ ಮರದ ದಿಮ್ಮಿಯನ್ನು ಪಿಕಪ್ ಗೆ ತುಂಬಿಸುವ ವೇಳೆ ಮರ ಹಿಂದಕ್ಕೆ ಬಂದು ಗೋಪಾಲಕೃಷ್ಣ ರವರ ಮೈಮೇಲೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತರುವ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Ad Widget . Ad Widget .

ಮೃತ ಗೋಪಾಲಕೃಷ್ಣ ರವರು ಬಡಗನ್ನೂರು ಗ್ರಾ.ಪಂ ಸದಸ್ಯ ಹಾಗೂ ಸುಳ್ಯಪದವು ಯುವ ಶಕ್ತಿ ಬಳಗದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *