ಕೇರಳಕ್ಕೆ ಪ್ರವೇಶಿಸದ ಮುಂಗಾರು| ಇನ್ನೊಂದು ವಾರ ಮಾನ್ಸೂನ್ ಮಳೆ ವಿಳಂಬ

ಸಮಗ್ರ ನ್ಯೂಸ್: ಮುಂಗಾರು ಮಾರುತಗಳು ಜೂನ್ 4 ರ ನಿನ್ನೆ ಕೇರಳ ಪ್ರವೇಶಿಸಲು ವಿಫಲವಾಗಿದ್ದು, ಇನ್ನೂ 3-4 ದಿನ ತಡವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Ad Widget ... ..

ಮುಂಗಾರು ಮಾರುತಗಳು ಜೂನ್ 4 ರಂದು ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

Ad Widget

ಆದರೆ ಮುಂಗಾರು ಮಾರುತಗಳ ಕುರಿತಾಗಿ ಉತ್ತಮ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಮಾರುತ ಚಲನೆ ವೇಗ ಪಡೆದುಕೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸದ್ಯ ಸಮುದ್ರಮಟ್ಟಕ್ಕಿಂತ 2 ಕಿ. ಮೀ ಎತ್ತರದವರೆಗೆ ಮಾರುತಗಳು ಪೂರ್ವಾಭಿಮುಖವಾಗಿ ಬೀಸುತ್ತಿದೆ. ಹಾಗಾಗಿ ಮುಂದಿನ 3-4 ದಿನಗಳಲ್ಲಿ ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *