Ad Widget .

ಪುತ್ತೂರು: ಕೇರಳದ ಕೊಲೆ ಆರೋಪಿಯ ಬಂಧಿಸಿದ ಕರ್ನಾಟಕ ಪೊಲೀಸ್

ಸಮಗ್ರ ನ್ಯೂಸ್: ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನ ವೇಳೆ ತಮ್ಮನನ್ನು ಕೊಲೆ ಮಾಡಿ ಪುತ್ತೂರು ಕಡೆಗೆ ತಪ್ಪಿಸಿಕೊಳ್ಳಲು ತೆರಳಿದ್ದ ಆರೋಪಿ ಅಣ್ಣನನ್ನು ಪುತ್ತೂರು ನಗರ ಠಾಣೆ ಪೊಲೀಸರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಪತ್ತೆ ಮಾಡಿ ಬಂಧಿಸಿದ್ದಾರೆ. ಬಳಿಕ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Ad Widget . Ad Widget .

ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಪೈವಳಿಕೆಯ ನಿವಾಸಿ ಜಯರಾಮ ನೋಂಡ ಬಂಧಿತ ಆರೋಪಿ. ಜಯರಾಮ ನೋಂಡ ತನ್ನ ಸಹೋದರ ಪ್ರಭಾಕರ ನೋಂಡ ಅವರನ್ನು ಶನಿವಾರ ನಸುಕಿನ ವೇಳೆ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯು ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿರುವ ಕುರಿತು ಕೇರಳ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಪುತ್ತೂರು ನಗರ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ಗಳಾದ ಸ್ಕರಿಯ, ಉದಯ, ಕಾನ್‌ಸ್ಟೇಬಲ್‌ ಕಿರಣ್ ಅವರು ಕಾರ್ಯಾಚರಣೆ ನಡೆಸಿದರು.

Ad Widget . Ad Widget .

ವಶಕ್ಕೆ ಪಡೆಯಲು ಮುಂದಾದ ವೇಳೆ ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಪಕ್ಕದಲ್ಲಿರುವ ಕೊಳಕು ನೀರು ಹರಿದು ಹೋಗುತ್ತಿರುವ ತೋಡಿಗೆ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಪೊಲೀಸರೂ ಕೆಸರಿನಲ್ಲಿಯೇ ಬೆನ್ನಟ್ಟಿ ಆತನನ್ನು ಹಿಡಿದಿದ್ದಾರೆ. ಜಯರಾಮ ನೋಂಡ 10 ವರ್ಷದ ಹಿಂದೆ ತನ್ನ ಅಣ್ಣನನ್ನೂ ಕೊಲೆ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.

Leave a Comment

Your email address will not be published. Required fields are marked *