Ad Widget .

ಮಾತು ತಪ್ಪಿದ ಸಿಎಂ ಸಿದ್ದು| ಝೀರೋ ಟ್ರಾಫಿಕ್ ಬೇಡವೆಂದು ಸದ್ದಿಲ್ಲದೆ ಪ್ರಯಾಣ

ಸಮಗ್ರ ನ್ಯೂಸ್: ಕರ್ನಾಟಕದ ನೂತನ ಸಿಎಂ ಆಗಿ ಆಯ್ಕೆಯಾದ ತಕ್ಷಣ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಚಾರಕ್ಕೆ ಜೀರೊ ಟ್ರಾಫಿಕ್​ ಬೇಡ ಎಂದು ಹೇಳಿದ್ದರು. ಈ ಮೂಲಕ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

Ad Widget . Ad Widget .

ಆದರೆ, ಶನಿವಾರ ಸಂಜೆ ಏಕಾಏಕಿ ಮಾತು ಮರೆತ ಸಿದ್ದರಾಮಯ್ಯ ಅವರು ಸದ್ದಿಲ್ಲದೆ ಜೀರೋ ಟ್ರಾಫಿಕ್ ಬಳಸಿಕೊಂಡು ಬೆಂಗಳೂರಿನ ಸೌತ್​ ಎಂಡ್ ಸರ್ಕಲ್​ನಿಂದ ಲಾಲ್​ಬಾಗ್ ವೆಸ್ಟ್​​ಗೇಟ್​ ತನಕ ಪ್ರಯಾಣ ಮಾಡಿರುವುದು ವರದಿಯಾಗಿದೆ.

Ad Widget . Ad Widget .

ಸಿದ್ದರಾಮಯ್ಯ ಅವರಿಗೆ ಜೀರೋ ಟ್ರಾಫಿಕ್​ ವ್ಯವಸ್ಥೆ ಕಲ್ಪಿಸಿರುವ ಮಾಹಿತಿಯನ್ನು ನಗರ ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ತುರ್ತು ಅಗತ್ಯದ ಕಾರಣಕ್ಕೆ ಅವರಿಗೆ ಈ ಸೌಕರ್ಯ ಕಲ್ಪಿಸುವುದು ಅನಿವಾರ್ಯವಾಯಿತು. ಉಳಿದಂತೆ ಅವರ ಸೂಚನೆಯಂತೆ ಜೀರೋ ಟ್ರಾಫಿಕ್​ ಸೌಲಭ್ಯ ಕಲ್ಪಿಸುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಟ್ವೀಟ್​ ಮಾಡುವ ಮೂಲಕ ತಮಗೆ ಜೀರೋ ಟ್ರಾಫಿಕ್​ ಬೇಡ ಎಂದು ಹೇಳಿದ್ದಾರೆ. ತಾವು ಜೀರೋ ಟ್ರಾಫಿಕ್​ನಲ್ಲಿ ಸಂಚರಿಸಿದರೆ ಉಳಿದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಸೌಲಭ್ಯವನ್ನು ತಿರಸ್ಕರಿಸಿದ್ದೇನೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಅದಾಗಿ ಕೆಲವೇ ದಿನಗಳಲ್ಲಿ ಅವರು ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ.

1 thought on “ಮಾತು ತಪ್ಪಿದ ಸಿಎಂ ಸಿದ್ದು| ಝೀರೋ ಟ್ರಾಫಿಕ್ ಬೇಡವೆಂದು ಸದ್ದಿಲ್ಲದೆ ಪ್ರಯಾಣ”

Leave a Comment

Your email address will not be published. Required fields are marked *