ಮಂಗಳೂರು: SSF ಮಂಚಿಲ ಯುನಿಟ್ ನಿಂದ ‘ಪರಿಸರ ದಿನ ಆಚರಣೆ’

ಸಮಗ್ರ ನ್ಯೂಸ್: SSF ಮಂಚಿಲ ಯುನಿಟ್ ವತಿಯಿಂದ ‘ಪರಿಸರ ದಿನ’ ಕಾರ್ಯಕ್ರಮವನ್ನು ಮಂಚಿಲ ಮದ್ರಸ ಹಾಲ್ ನಲ್ಲಿ ಜೂನ್ 04 ರಂದು ಏರ್ಪಡಿಲಾಗಿತ್ತು.

Ad Widget ... ..

ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷರು ಜಾಫರ್ ಯು.ಎಸ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸಿನನ್ ಮಿಸ್ಬಾಹಿ ಮುಅಝಿನ್ ಉಸ್ತಾದರು ಉದ್ಘಾಟಿಸಿದರು. ಶಾಹಿಲ್ ಮಂಚಿಲ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಅಯ್ಯುಬ್ ಮಂಚಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

Ad Widget

ಇದೇ ವೇಳೆ ಸುಹಾನ್ ಅಲ್ವಾರವರು ದೇನಿಗೆಯಾಗಿ ನೀಡಿದ ಸಸಿಗಳನ್ನು SSF ಮಂಚಿಲ ಯೂನಿಟ್ ವತಿಯಿಂದ ವಿತರಿಸಲಾಯಿತು ಹಾಗೂ ರೈನ್ಬೋ ಮಕ್ಕಳಿಗೆ ಏರ್ಪಡಿಸಿದ ಕ್ರೀಡಾ ಕೂಟ ಸ್ಪರ್ಧಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಬಿಲಾಲ್ ಮಂಚಿಲ ಸ್ವಾಗತಿಸಿದರು. ಆಶಿಕ್ ಮಂಚಿಲ ವಂದಿಸಿದರು. ಕಾರ್ಯಕ್ರಮದಲ್ಲಿ KMJ ಮಂಚಿಲ ಅಧ್ಯಕ್ಷರು ಹಮೀದ್ ಮಂಚಿಲ, ಸಫರ್ ಕ್ಲಬ್ ಅಧ್ಯಕ್ಷರು ನಝೀರ್ ಮಂಚಿಲ, ಮನ್ಸೂರ್ ಮಂಚಿಲ, ಸುಹೈಲ್ ಮಂಚಿಲ, ಶಫೀಕ್ ಅಳೇಕಲ, ಅಫ್ರಾಝ್ ಮಂಚಿಲ ಹಾಗೂ ಮಂಚಿಲ ಯುನಿಟ್ ಎಲ್ಲಾ ಎಕ್ಸಿಕುಟಿವ್ ನಾಯಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *