Ad Widget .

ಕಲಾವಿದನ ಕೈಚಳಕ| ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಸಾಮಾಜಿಕ ಕಾರ್ಯಕರ್ತ ಹಾಗೂ ಹವ್ಯಾಸಿ ಕಲಾವಿದ ಗಣೇಶ್‌ ರಾಜ್ ಸರಳೇಬೆಟ್ಟು ಅವರ ಕೈಚಳಕದಲ್ಲಿ ಅಶ್ವಥ ಎಲೆಯಲ್ಲಿ ಇತ್ತೀಚೆಗೆ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಮೂಡಿಬಂದಿದ್ದಾರೆ.

Ad Widget . Ad Widget .

ಬಡವರ ಭಾಗ್ಯಗಳ ಸರದಾರ, ಅನ್ನ ಭಾಗ್ಯದ ರೂವಾರಿ ಸಿದ್ದರಾಮಯ್ಯ ಅವರ ಚಿತ್ರವನ್ನು ಸ್ವತಹ ಗಣೇಶ್ ರಾಜ್ ಸರಳೇಬೆಟ್ಟು ಅವರೇ ಅಶ್ವಥ ಮರದ ಎಲೆಯಲ್ಲಿ ರಚಿಸಿದ್ದಾರೆ.

Ad Widget . Ad Widget .

ಬಾರಕೂರು ಸಮೀಪದ ಬೆಣ್ಣೆಕುದ್ರುನ ಕುಲಮಾಸ್ತಿ ಅಮ್ಮನವರ ದೇವಾಲಯದ ಆವರಣದಲ್ಲಿರುವ ಅಶ್ವಥ ಮರದ ಅತ್ಯಂತ ದೊಡ್ಡ ಗಾತ್ರದ ಎಲೆಯನ್ನು ಆಯ್ಕೆ ಮಾಡಿದ್ದು, ಅದನ್ನು 15 ದಿನಗಳ ಕಾಲ ನೀರಿನಲ್ಲಿ ನೆನೆಹಾಕಿ ಬಳಿಕ ಸ್ಟೆನ್ ಸಿಲ್‌ನಲ್ಲಿ ಕಪ್ಪು ಬಿಳುಪು ಬಣ್ಣ ಬಳಸಿ ಚಿತ್ರ ಸಿದ್ಧಪಡಿಸಿದ್ದಾರೆ.

Leave a Comment

Your email address will not be published. Required fields are marked *