Ad Widget .

ಸೆಕ್ಸ್ ಗೆ ಬಿಡಲೊಲ್ಲದ‌ ಬಾಣಂತಿ ಪತ್ನಿ| ಕೊಂದೇ ಬಿಟ್ಟ ಪಾಪಿ ಪತಿ

ಸಮಗ್ರ ನ್ಯೂಸ್: ಮಗು ಹೆತ್ತು ತಿಂಗಳು ಕಳೆಯುವಷ್ಟರಲ್ಲೇ ಸೆಕ್ಸ್ ಗೆ ಪತ್ನಿಯನ್ನು ಒತ್ತಾಯಿಸಿದ ಪತಿ ಆಕೆ ಒಪ್ಪದಿದ್ದಾಗ ಕೊಂದ ವಿಕೃತ ಘಟನೆ
ಹೈದರಾಬಾದ್ ನಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪೊಲೀಸರು ವಿಚಾರಣೆಗೆ ಒಳಪಡಿಸಿದ ವೇಳೆ ತಾನು ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಮೃತರ ಮರಣೋತ್ತರ ಪರೀಕ್ಷೆಯಿಂದ ಆಕೆಯ ಸಾವಿನ ಕಾರಣ ಖಾತ್ರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget . Ad Widget . Ad Widget .

ತಿಂಗಳ ಹಿಂದಷ್ಟೇ ತನ್ನ ಎರಡನೇ ಮಗುವಿಗೆ ಜನ್ಮವಿತ್ತಿದ್ದ ಸಂತ್ರಸ್ತೆಯೊಂದಿಗೆ ಮೇ 20ರ ರಾತ್ರಿ ಮಲಗಲು ಆಕೆಯ ಪತಿ ಇಚ್ಛಿಸಿದ್ದಾನೆ. ಆದರೆ ಇದಕ್ಕೆ ಮಡದಿ ನಕಾರವೆತ್ತಿದಾಗ ಸಿಟ್ಟಿಗೆದ್ದ ಆಕೆಯ ಪತಿ ಆಕೆಯ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ಇದರ ಬೆನ್ನಿಗೇ ಗಾಬರಿಗೊಂಡ ಆರೋಪಿ ತನ್ನ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾನೆ.

ಸಂತ್ರಸ್ತೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮಾರ್ಗಮಧ್ಯೆಯೇ ಜೀವ ಕಳೆದುಕೊಂಡಿರುವುದನ್ನು ಆಸ್ಪತ್ರೆ ಮೂಲಗಳು ಖಾತ್ರಿ ಪಡಿಸಿವೆ. ಮಹಿಳೆಯ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಮಹಿಳೆಯ ದೇಹದ ಗಂಟಲಿನ ಮೇಲೆ ಮೊಳೆಗಳ ಗುರುತಗಳಿದ್ದಿದ್ದನ್ನು ಗಮನಿಸಿದ ಪೊಲೀಸರು ಆಕೆಯ ಪತಿಯನ್ನು ವಿಚಾರಣೆ ಮಾಡಿ ಸತ್ಯ ಬಾಯಿ ಬಿಡಿಸಿದ್ದಾರೆ.

Leave a Comment

Your email address will not be published. Required fields are marked *