ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮವಾಗಿರುವ ಹಿನ್ನಲೆ ತಕ್ಷಣ ನಿಲ್ಲಿಸುವಂತೆ ಜಿಲ್ಲಾಧಿಕಾರಿಯ ಆದೇಶವಾಗಿರುವ ಬಗ್ಗೆ ತಿಳಿದು ಬಂದಿದೆ.
ಕಳೆದ ಕೆಲ ವರ್ಷಗಳಿಂದ ಅಳವುಪಾರೆ ಎಂಬಲ್ಲಿ ಸ್ಥಳೀಯರ ವಿರೋಧದ ನಡುವೆಯೂ ನಡೆಯುತ್ತಿದ್ದ ಗಣಿಗಾರಿಕೆಯನ್ನು ಇದೀಗ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.
ಸುತ್ತಮುತ್ತ ನೂರಾರು ಮನೆಗಳು, ಹತ್ತಿರದಲ್ಲಿ ಸರ್ಕಾರಿ ಶಾಲೆ, ನೀರಿನ ಟ್ಯಾಂಕ್,ಸರ್ಕಾರಿ ಕಟ್ಟಗಳು, ದೇವಸ್ಥಾನ ಇದೆಲ್ಲಾ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳದ ಹತ್ತಿರ ಇರುವುದರಿಂದ ಮತ್ತು ಸ್ಫೋಟಕಗಳನ್ನು ಬಳಸುವುದರಿಂದ ತೊಂದರೆ ಉಂಟಾಗುವ ಹಿನ್ನಲೆ ಸ್ಥಳೀಯರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ್ದಲ್ಲದೆ ಹಲವು ಬಾರಿ ಧರಣಿ ಕೂಡ ನಡೆಸಿದ್ದರು.
ಈ ಹಿನ್ನಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಇದನ್ನು ಸ್ಥಳ ಪರಿಶೀಲಿಸಿ ಕ್ರಷರ್ ಸುರಕ್ಷಿತ ವಲಯದಿಂದ ಅಂತರದೊಳಗೆ ಮನೆ, ಕುಡಿಯುವ ನೀರಿನ ಟ್ಯಾಂಕ್ ಹಾಗೂ, ಸರ್ಕಾರಿ ಶಾಲೆ ಹಾಗೂ ಇರುವುದರಿಂದ ಪ್ರಸ್ತುತ ಸದರಿ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಸ್ಫೋಟಕ ಬಳಸುವುದನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದರು.
ಆದೇ ರೀತಿ ಈ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಯವರು ಸ್ಥಳೀಯ ಅಧಿಕಾರಿಯವರಿಗೆ ಸೂಚಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇನ್ನೂ 388 ಮೀ ದೂರದಲ್ಲಿ ಇರುವ ಸರ್ಕಾರಿ ಶಾಲೆಯನ್ನು ಗಣಿಗಾರಿಕೆಯ ಪರವಾನಗಿ ಮಾಡುವ ವೇಳೆ 1 ಕೀ.ಮೀ ದೂರದಲ್ಲಿ ಶಾಲೆ ಇರುವುದಾಗಿ ದಾಖಲೆ ನೀಡಿದಲ್ಲದೆ ಇತರ ಕೆಲವು ದಾಖಲೆಗಳನ್ನು ಕೂಡ ಸರಿಯಾಗಿ ನೀಡದೆ ಪರವಾನಗಿ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಇದು ನಿಜವೇ ಅದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕಿದೆ.