Ad Widget .

ಸುಳ್ಯ: ರಾಮಭಕ್ತ ಕರಸೇವಕಬಾಲಚಂದ್ರ ವಳಲಂಬೆ ಇನ್ನಿಲ್ಲ

ಸಮಗ್ರ ನ್ಯೂಸ್: ರಾಮಭಕ್ತ, ಅಯೋಧ್ಯೆ ಕರಸೇವಕ ಎಂದೇ ಗುರುತಿಸಿಕೊಂಡಿದ್ದ ಬಾಲಚಂದ್ರ ವಳಲಂಬೆ ಇಂದು(ಜೂ.2) ನಿಧನರಾಗಿದ್ದಾರೆ.

Ad Widget . Ad Widget .

ಮೂಲತಃ ದಿವಂಗತ ವಿಟ್ಲ ರಾಮಣ್ಣ ಗೌಡ ಎಂಬವರ ಪುತ್ರ ವಳಲಂಬೆ ನಿವಾಸಿಯಾಗಿದ್ದ ಬಾಲಚಂದ್ರ ಅನೇಕ ಬಾರಿ ಅಯೋದ್ಯೆ ಕರಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಹಲವು ಬಾರಿ ಬಂಧನಕ್ಕೊಳಗಾಗಿದ್ದರು. ಅಯೋಧ್ಯಾ ವಿವಾದ ತಾರಕಕ್ಕೇರಿ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಗಸ್ತು ನಿರತ ಸಶಸ್ತ್ರ ಸೇನಾ ಸಿಬ್ಬಂದಿಗಳ ಲಾಠಿಯೇಟಿಗೂ ಜಗ್ಗದೆ ರಾಮಭಕ್ತನಾಗಿ ಕರಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದನ್ನು ಇಂದಿಗೂ ಅನೇಕರು ನೆನಪಿಸಿಕೊಳ್ಳುತಿದ್ದಾರೆ.

Ad Widget . Ad Widget .

ಬಾಲಚಂದ್ರರು ತನ್ನ ತಂದೆ, ತಾಯಿ ಮತ್ತು ಸಹೋದರರ ಸಹಿತ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡು ಅವಿವಾಹಿತನಾಗಿಯೇ ಉಳಿದಿದ್ದು, ಆರೆಸ್ಸೆಸ್ ಸಿದ್ದಾಂತಿಯಾಗಿ, ರಾಮಭಕ್ತನಾಗಿ ಯಾರ ತಂಟೆತಕರಾರಿಗೂ ಹೋಗದೇ ಕೂಲಿಕಾರ್ಮಿಕನಾಗಿ ಜೀವನ ನಿರ್ವಹಿಸುತಿದ್ದರು.

ಬಿಜೆಪಿ ಬೆಂಬಲಿಗನಾದರೂ, ಕಾಂಗ್ರೆಸ್ ನಾಯಕರೋರ್ವರ ನೆರಳಲ್ಲೇ ಜೀವನದುದ್ದಕ್ಕು ಶಿಸ್ತು, ಆದರ್ಶವಾದಿ, ಪರೋಪಕಾರಿಯಾಗಿ ಬದುಕು ನಿರ್ವಹಿಸುತ್ತಿದ್ದು, ಹಿರಿಕಿರಿಯರ ಪ್ರೀತಿಗೆ ಪಾತ್ರರಾಗಿದ್ದರು.

ಕಳೆದೆರಡು ದಿನಗಳ ಹಿಂದೆ ಏಕಾಏಕಿ ಅನಾರೋಗ್ಯಕ್ಕೀಡಾದ ಅವರನ್ನು ವಕೀಲ ಸನತ್ ಮುಳುಗಾಡು ಅವರು ಆಸ್ಪತ್ರೆ ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ(ಜೂ.2) ಕೊನೆಯುಸಿರೆಳೆದಿದ್ದಾರೆ.

Leave a Comment

Your email address will not be published. Required fields are marked *